ಶಾಲಾ ಬಸ್ ನಲ್ಲಿ ನಿಮ್ಮ ಮಗು ಹೋಗುತ್ತಿದ್ದರೆ ತಪ್ಪದೇ ಈ ವಿಡಿಯೋ ನೋಡಿ


ಕುಣಿಗಲ್ ಪಟ್ಟಣದ ಬಿಜಿಎಸ್ ಶಾಲೆಗೆ ಸೇರಿದ ಬಸ್ನಲ್ಲಿ ಮಗು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದು ಪೋಷಕರು ಸಾರ್ವಜನಿಕರ  ಜೊತೆ ಶಾಲೆಯ ಮುಂಭಾಗ ಪ್ರತಿಭಟನೆ ಮಾಡಿ ರಸ್ತೆ ತಡೆ ನಡೆಸಿದ್ದಾರೆ

 ಮೃತ ಮಗು ಬಿಜಿಎಸ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಬಾಲಾಜಿ ಎಂದು ಗುರುತಿಸಲಾಗಿದೆ
 ಶಾಲೆ ಬಿಟ್ಟ ನಂತರ ತನ್ನ ಗ್ರಾಮಕ್ಕೆ ತೆರಳುವಾಗ ಬಸ್ ಬಾಗಿಲಿಂದ ಆಚಾನಕ್ಕಾಗಿ ಬಿದ್ದ ಪರಿಣಾಮ ಹಿಂಬದಿಯ ಚಕ್ರಕ್ಕೆ ಮಗು ಸಿಲುಕಿ ಮೃತವಾಗಿದೆ
 ವಿಚಾರ ತಿಳಿಯುತ್ತಿದಂತೆ ಮಗುವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದ್ದು ಮಗು ಮೃತ ವಾಗಿರುವುದನ್ನು ಖಚಿತ ಪಡಿಸಿಕೊಂಡ ಪೋಷಕರು ಶಾಲೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

 ನಂತರ ಮಗುವಿನ ಶವವನ್ನು ಬಿಜಿಎಸ್ ಶಾಲಾ ಮುಂಭಾಗಕ್ಕೆ ವರ್ಗಾಯಿಸಲಾಗಿ ಶಾಲೆಯ ಮುಂಬಾಗ ಪ್ರತಿಭಟನೆ ಆರಂಭಿಸಿ ಸ್ಥಳಕ್ಕೆ ಆಡಳಿತ ಮಂಡಳಿಯವರು ಬರಬೇಕೆಂದು ಒತ್ತಾಯಿಸಿದರು
 ಅಭಿಮಾನಿಗಳು ಹಾಗೂ ಪೋಷಕರು ಆಕ್ರೋಶ ಮುಗಿಲು ಮುಟ್ಟಿತ್ತು ನಂತರ ಪಟ್ಟಣದ ಮುಖ್ಯ ರಸ್ತೆಯನ್ನು ಬಂದ್ ಮಾಡಲು ಮುಂದಾದರು