ಮಾಗಡಿ ಗಣೇಶನ ಜನ್ಮಸ್ಥಳದ ವಿಶೇಷ

ಮಾಗಡಿ ಗಣೇಶನ ಜನ್ಮಸ್ಥಳದ ವಿಶೇಷ
 ಎಲ್ಲಾ ಕಡೆ ಗಣೇಶನ ಅಬ್ಬರ ಮಕ್ಕಳು ಸೇರಿದಂತೆ ದೊಡ್ಡವರಿಗೆ ಗಣೇಶನ ಅಚ್ಚುಮೆಚ್ಚು,
 ಗಣೇಶ ಮೂರ್ತಿಯನ್ನು ಹೇಗೆ ತಯಾರಿಸುತ್ತಾರೆ? ಅದರ ಪರಿಶ್ರಮ ಎಷ್ಟಿದೆ ? ಯಾವ ಮಣ್ಣಿನಿಂದ ತಯಾರಿಸುತ್ತಾರೆ ? ಹೀಗೆ ಹಲವಾರು  ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ
 ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.....


ಮಾಗಡಿ ಪಟ್ಟಣದ ಮಲ್ಲಣ್ಣ ರವರ ಕುಟುಂಬ ಮಾಗಡಿ ಟೌನ್ ಡೋಮಲೈಟ್ ಸರ್ಕಲ್ ನಲ್ಲಿ  ವಂಶ ಪಾರಂಪರಿಕವಾಗಿ ಗಣೇಶನ ತಯಾರಿಕೆಯಲ್ಲಿ ವಂಶಸ್ಥರು ಯಾವುದೇ ರಾಸಾಯನಿಕ ಬಳಸದೆ ಪಾರಂಪರಿಕವಾಗಿ ತಮ್ಮ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ,

 ಗಣೇಶನ ತಯಾರಿಕೆಗಾಗಿ ಬಸವ ಜಯಂತಿ ಅಂದು ಕೆರೆಯ ಜೇಡಿಮಣ್ಣನ್ನು  ಪೂಜೆ ಮಾಡಿ ತಂದು ದೇವಾಲಯದಲ್ಲಿ ಪೂಜೆ ಮಾಡಿಸಿ ನಂತರ ಪ್ರತಿಮೆ ತಯಾರಿಕೆಗೆ ಮುಂದಾಗುತ್ತಾರೆ,
 ಇವರು ತಯಾರಿಸುವ ಗಣೇಶ ಮೂರ್ತಿಗಳಿಗೆ ಬೆಂಗಳೂರು ರಾಮನಗರ ತುಮಕೂರು ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಬೇಡಿಕೆ ಇದೆ.

 ವಂಶ ಪಾರಂಪರಿಕವಾಗಿ ಕಲಾವಿದರಾದ ಇವರುಗಳು ಗಣೇಶ ಹಾಗೂ ಇತರ ದೇವತೆಯ ಮೂರ್ತಿಗಳನ್ನು ತಯಾರಿಸುತ್ತಾರೆ ಸಾವಿರಾರು ಮೂರ್ತಿಗಳನ್ನು ತಯಾರಿಸುವ ಕೀರ್ತಿ ಇವರಿಗಿದ್ದು 5000 ದಿಂದ ಪ್ರಾರಂಭಗೊಂಡು ಒಂದುವರೆ ಲಕ್ಷದ ವರೆಗೂ ವಿವಿಧ ಮೂರ್ತಿಗಳನ್ನು ತಯಾರಿಸಿದ್ದಾರೆ.

 ಇವರು ತಯಾರಿಸುವ ಆಕರ್ಷಕ ಗಣೇಶನ ಮೂರ್ತಿಗಳಿಗೆ ಫುಲ್ ಡಿಮ್ಯಾಂಡ್, ನಂದಿ ಗಣಪ ಸಾಯಿಬಾಬಾ ಗಣಪ ವೆಂಕಟೇಶ್ವರ ಗಣಪ ಬಾಲಾಜಿ ಗಣಪ ನಟರಾಜ ಗಣಪ ನವಿಲು ಗಣಪ ವಿಶೇಷ ಗಣಪ ಸಿಂಹ ಗಣಪ ಕಾಲಭೈರವ ಗಣಪ ಸೇರಿದಂತೆ 500ಕ್ಕಿಂತ ಹೆಚ್ಚು ವಿವಿಧ ಆಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿವರ್ಷ ತಯಾರಿಸುತ್ತಾರೆ,




 ನೀವು ಬುಕ್ ಮಾಡಿ :-

 ಈ ವಿಶೇಷ ಗಣೇಶ ಮೂರ್ತಿಯನ್ನು ಕೂರಿಸಬೇಕೆಂಬ ಆಸೆ ಇದ್ದರೆ ಗಣೇಶ ಚತುರ್ಥಿ ಗಿಂತ ಮೂರು ತಿಂಗಳು ಮೊದಲೇ ಕೆಳಕಂಡ ವ್ಯಕ್ತಿಗಳನ್ನು ಸಂಪರ್ಕಿಸಿ ಬುಕ್ ಮಾಡಬಹುದು ಹೇಮಂತ ಕುಮಾರ್  8150005551 ಗಣೇಶ್ 9964371887 ಈ ದೂರವಾಣಿ ಮುಖಾಂತರ ಸಂಪರ್ಕಿಸಬಹುದು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಮಾಗಡಿ ಧೂಮ್ ಲೈಟ್ ವೃತ್ತಕ್ಕೆ ನೀವು ಈ ಲಿಂಕ್ ಮುಖಾಂತರ ಕೂಡ ಬೇಟಿ ಮಾಡಬಹುದು