ನೂರಾರು ಮನೆ ಊಟ ಒಂದೇ ತಟ್ಟೆಯಲ್ಲಿ ಸಿಗುವ ಜಾಗ



ನೂರಾರು ಮನೆ ಊಟ ಒಂದೇ ತಟ್ಟೆಯಲ್ಲಿ ಸಿಗುವ ಜಾಗ

 ಈ ಗ್ರಾಮದ ನೂರಾರು ಮನೆಯ ಊಟವನ್ನು ಒಂದೇ ತಟ್ಟೆಯಲ್ಲಿ ಊಟ ಮಾಡುವ ಸೌಭಾಗ್ಯ ಇಲ್ಲಿಗೆ ಬರುವ ಭಕ್ತರಿಗೆ ಸಿಗುತ್ತದೆ,

 ಪ್ರತಿ ಮನೆಯಲ್ಲಿ ತಾವು ತಯಾರಿಸಿದ ಅನ್ನ ಮುದ್ದೆ ಸಾರು ಪಾಯಿಸ ಇತ್ಯಾದಿ ಅಡಿಗೆಗಳನ್ನು ತಂದು ಭಕ್ತರು ಈ ದೇವಾಲಯದಲ್ಲಿ ಬಡಿಸುತ್ತಾರೆ,

 ಒನ್ನೊಂದು ಮನೆಯ ರುಚಿ ಒಂದೊಂದು ರೀತಿ ಇರುತ್ತದೆ ಅವೆಲ್ಲವೂ ಕೂಡ ಇಲ್ಲಿ ಮಿಶ್ರಣಗೊಂಡಾಗ ಅದ್ಬುತವಾದ ರುಚಿ ಹಾಗೂ ಮರೆಯಲಾರದ ಸ್ವಾಧ ನಿಮಗೆ ಸಿಗುತ್ತದೆ,

 ಪ್ರತಿಯೊಬ್ಬರೂ ಜಾತಿ ಧರ್ಮ ಭೇದ ಭಾವ ಮೇಲು ಕೀಳುಗಳನ್ನು ಮರೆತು ಆ ದಿನ ಎಲ್ಲರೂ ಒಟ್ಟಾಗಿ ಸೇರುತ್ತಾರೆ,


 ತಾವು ತಂದ ಆಹಾರ ಪದಾರ್ಥಗಳನ್ನು ಇಲ್ಲಿ ಬಂದ ಭಕ್ತರಿಗೆ ಬಡಿಸುವ ಮುಖಾಂತರ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ,

 ಈ ವಿಶೇಷ ಆಚರಣೆ ನಡೆಯುವುದು ಕುಣಿಗಲ್ ತಾಲೂಕಿನ ಎಡೆಯೂರ ಹೋಬಳಿಯ ಕಗ್ಗರೆತಪೋ ಕ್ಷೇತ್ರದಲ್ಲಿ ,

 ಇದು ಎಡೆಯೂರು ಸಿದ್ದಲಿಂಗೇಶ್ವರರು ತಪಸ್ಸು ಮಾಡಿದ ದಿವ್ಯ ಕ್ಷೇತ್ರ ಈ ತಪೋ ಕ್ಷೇತ್ರದಲ್ಲಿ ಈ ಆಚರಣೆ ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುತ್ತದೆ,
 ದಯವಿಟ್ಟು ನೀವು ಕೂಡ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ ಈ ವಿಶೇಷ ಆಚರಣೆಯಲ್ಲಿ ಭಾಗವಹಿಸಿ ಸಿದ್ದಲಿಂಗೇಶ್ವರರ ಕೃಪೆಗೆ ಪಾತ್ರರಾಗಿ