ಕುಣಿಗಲ್ ಪಟ್ಟಣದಲ್ಲಿ ಕತರ್ನಾಕ್ ಕಳ್ಳ
ವಾರ್ಡ್ ನಂಬರ್ 2ರ ನೀಲತ್ತಹಳ್ಳಿ ಗೇಟ್ ಬಳಿಯ ಮನೆಯೊಂದರ ಆವರಣದ ದೃಶ್ಯ ಇದು. ಮಂಗಳವಾರ ಬೆಳಗಿನ ಜಾವ 3.20ರ ಸುಮಾರಿಗೆ ಕತರ್ನಾಕ್ ಕಳ್ಳನೊಬ್ಬ ಈ ಮನೆ ಬಳಿಗೆ ನಡೆದುಕೊಂಡೇ ಬಂದು ಏನ್ ಮಾಡ್ತಾನೆ ನೋಡಿ...
... ಈತ ಪಾತ್ರೆ ಕದಿಯೋತರ ಆ್ಯಕ್ಟ್ ಮಾಡಿ,
ಚಪ್ಪಲಿ ಮತ್ತು ಟವೆಲ್ ಹಾಕಿಕೊಂಡು ಹೋಗೋದನ್ನ.
ಈ ಮನೆ ಇರೋದು ರಾಷ್ಟ್ರೀಯ ಹೆದ್ದಾರಿ NH-48ರ ಪಕ್ಕದಲ್ಲೇ. ನೋಡೋಕೆ ಯಾರೋ ತಲೆಕೆಟ್ಟವ ಅನ್ನಿಸೋದು ಸಹಜ. ಆದರೆ ಆತನ ಕಾಲಲ್ಲಿದ್ದ ಶೂ ಬಿಚ್ಚಿ ಈ ಮನೆಯವರ ಚಪ್ಪಲಿ ಧರಿಸ್ತಾನೆ. ಸೈಕಲ್ ಮೇಲಿಟ್ಟಿದ್ದ ಟವೆಲ್ ತೆಗೆದುಕೊಂಡು ಹೆಗಲ ಮೇಲೆ ಹಾಕಿಕೊಳ್ತಾನೆ. ತಲೆಕೆಟ್ಟವನಿಗೆ ಇಂತಹದ್ದೇ ಬೇಕು ಅಂತೇನಿರಲ್ಲ, ಸಿಕ್ಕಿದ್ದನ್ನ ಹಾಕಿಕೊಳ್ಳಬಹುದಿತ್ತು... ಮೇಲ್ನೋಟಕ್ಕೆ ಇದೆಲ್ಲಾ ನಾಟಕ ಅನ್ನಿಸುತ್ತೆ. ಬೇರೆ ಯಾವುದೋ ದುರುದ್ದೇಶದ ಯೋಜನೆಯಲ್ಲಿ ಬಂದಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ ಮನೆಯ ಮಾಲೀಕರು ಮತ್ತು ಸ್ಥಳೀಯರು.
ಅಂದಹಾಗೆ ಈ ಘಟನೆ ನಡೆದಿರೋದು ಮಲ್ಲಾಘಟ್ಟ ಶ್ರೀನಿವಾಸ್ ಅವರ ಮನೆ ಮುಂದೆ.