ಜನಗಳ ಜೊತೆ ಮುಖ್ಯಮಂತ್ರಿ ಚಂದ್ರು
ಸಾರ್ವಜನಿಕರ ನಡುವೆ ಹೋಗಿ ಅವರ ಸಮಸ್ಯೆಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ
ಎಎಪಿ ಪಕ್ಷ ಸಂಘಟನೆಗಾಗಿ ಜನಗಳ ಮಧ್ಯೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುವುದಕ್ಕೋಸ್ಕರ ಸಂವಾದ ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಹುಲಿಯೂರು ದುರ್ಗದಿಂದ ಪ್ರಾರಂಭಿಸುತ್ತಿದ್ದೇವೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಹಾಗಿರಿವುದು ಇದೇ ಮೊದಲನೇ ಬಾರಿಯಲ್ಲ ಆಗಿಂದಾಗೆ ಆಗುತ್ತಿರುತ್ತದೆ ಅದರಿಂದ ಯಾವುದೇ ತೊಂದರೆ ಇಂಡಿಯಾ ಒಕ್ಕೂಟಕ್ಕೆ ಆಗುವುದಿಲ್ಲ ಎಂದರು,
ಬಿಜೆಪಿ ಪಕ್ಷದ ಕೋಮುವಾದ ನೀತಿಯಿಂದ ಹಲವಾರು ಪಕ್ಷಗಳು ಘಟಬಂಧನ್ ಮಾಡಿಕೊಂಡಿವೆ ಇದರಿಂದ ಮುಂದಿನ ಬಾರಿಗೆ ಮೋದಿ ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದರು,
ಏ ಪಿ ಜಿಲ್ಲಾಧ್ಯಕ್ಷ ಜಯರಾಮಯ್ಯ ಮಾತನಾಡಿ ಪ್ರತಿ ಜನರ ಸಮಸ್ಯೆ ಆಲಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಪಕ್ಷ ನಡೆಸುತ್ತಿದೆ ಇದರಿಂದ ಪಕ್ಷದ ಸಂಘಟನೆಯ ಜೊತೆಗೆ ಸಾರ್ವಜನಿಕರ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದರು,
ಸಾರ್ವಜನಿಕವಾಗಿ ಹೋಟೆಲ್ ನಲ್ಲಿ ಕಾಫಿ ಕುಡಿದು ಅಲ್ಲಿ ಇದ್ದ ಹಲವಾರು ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರು