ಪಡಿತರ ಚೀಟಿ15000 ಕ್ಕಿಂತ ಹೆಚ್ಚು ಕುಟುಂಬಗಳು ಸಮಸ್ಯೆ 



ಪಡಿತರ ಚೀಟಿ ತಿದ್ದುಪಡಿ ಸಮಸ್ಯೆಯಿಂದ 15000 ಕ್ಕಿಂತ ಹೆಚ್ಚು ಕುಟುಂಬಗಳು ಸಮಸ್ಯೆ ಎದುರಿಸುತ್ತಿದ್ದು ಸರ್ವರ್ ಸಮಸ್ಯೆ ಆ ಸಂಕಷ್ಟ ಇನ್ನಷ್ಟು  ಹೆಚ್ಚಿಸಿದೆ,

ತಾಲೂಕಿನಲ್ಲಿ 65851 ಪಡಿತರ ಚೀಟಿದಾರರಿದ್ದಾರೆ ಈ ಪೈಕಿ 15 ಸಾವಿರಕ್ಕಿಂತ ಹೆಚ್ಚು ಪಡಿತರ ಚೀಟಿಯಲ್ಲಿ ತಿದ್ದುಪಡಿ ಸೇರ್ಪಡೆ ಸೇರಿದಂತೆ ಹಲವಾರು ಸಮಸ್ಯೆಗಳು ಕಾಡುತ್ತಿವೆ.

 ಗೃಹಲಕ್ಷ್ಮಿ ಯೋಜನೆಗೆ ಹಾಗೂ ಭಾಗ್ಯಲಕ್ಷ್ಮಿ ಯೋಜನೆಗೆ ಮುಖ್ಯವಾದ ದಾಖಲಾತಿಯನ್ನಾಗಿ ಪಡಿತರ ಚೀಟಿಯನ್ನು ಪರಿಗಣಿಸಲಾಗುತ್ತದೆ ಆದರೆ ಪಡಿತರ ಚೀಟಿಯಲ್ಲಿ ಉಂಟಾಗುವ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ  ಸರ್ವರ್ ಸಮಸ್ಯೆ ಸಾರ್ವಜನಿಕರು ಕಾಡುತ್ತಿದ್ದು  ಸೈಬರ್ ನಿಂದ ಸೈಬರ್ ಗೆ ಸೇವಾ ಕೇಂದ್ರದಿಂದ ಗ್ರಾಮವನ್ ಗೆ ಪ್ರತಿನಿತ್ಯ ಅಲೆದಾಡುವಂಥಾಗಿದೆ.

ಪ್ರತಿದಿನ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿರುವ ಆಹಾರ ಶಾಖೆಗೆ ಬೇಟಿ ನೀಡಿದರು ಕೂಡ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಆರೋಪಿಸಿದ್ದಾರೆ.

 ಸರ್ವರ್ ಇಲ್ಲದ ಕಾರಣ ದಿನಕ್ಕೆ ಒಂದು ಕಾರ್ಡ್ಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಕಂಪ್ಯೂಟರ್ ಆಪರೇಟರ್ ಅವರ ಮಾತಾಗಿದೆ.

 ಸರ್ಕಾರ ಆದಷ್ಟು ಬೇಗ ಸರ್ವರ್ ಸಮಸ್ಯೆ ಸರಿಪಡಿಸದಿದ್ದರೆ ಭಾಗ್ಯಲಕ್ಷ್ಮಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ದೊರಕುವುದು ಕಷ್ಟವಾಗುತ್ತಿದೆ ಈ ಬಗ್ಗೆ ಅಧಿಕಾರಿಗಳು ಹಲವರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಸರ್ವ ಸಮಸ್ಯೆ ಬಗೆಹರಿದಿಲ್ಲ ಎಂದು ಕೈ ಚೆಲ್ಲುತ್ತಾರೆ

 ಆದರೆ ಪ್ರತಿ ದಿನ ಬಡವರು ಮಾತ್ರ ತಮ್ಮ ಪಡಿತರ ಚೀಟಿಯ ಜೊತೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ ಸರ್ಕಾರ ಇದರ ಬಗ್ಗೆ ಕ್ರಮ ವಹಿಸಬೇಕಿದೆ