ಶಕ್ತಿ ಯೋಜನೆಯ ಬಸ್ ಗಳಿಗಾಗಿ ಕುಣಿಗಲ್ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಮಹಿಳೆಯರು
ಬಸ್ ಗಾಗಿ ಕಾದು ಬೇಸತ್ತು ಕೆಎಸ್ಆರ್ಟಿಸಿ ಅಧಿಕಾರಿಗಳ ಮೇಲೆ ತರಾಟೆಗೆ ತೆಗೆದುಕೊಂಡ ಘಟನೆ ಕುಣಿಗಲ್ ಬಸ್ ನಿಲ್ದಾಣದಲ್ಲಿ ನಡೆದಿದೆ
ಕುಣಿಗಲ್ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮೈಸೂರು ಚನ್ನಪಟ್ಟಣ ಭಾಗಕ್ಕೆ ಸಂಚರಿಸುವ ಹಲವಾರು ಮಹಿಳೆಯರು ಬಸ್ ಇಲ್ಲದ ಕಾರಣ ಅಧಿಕಾರಿಗಳಿಗೆ ಗರಾವ್ ಹಾಕಿದ್ದಾರೆ.
ಸುಮಾರು ಗಂಟೆಗಳವರೆಗೆ ಬಸ್ ನಿಲ್ದಾಣದಲ್ಲಿ ಮೈಸೂರು ಭಾಗದ ಬಸ್ ಗಳಿಗಾಗಿ ಕಾಯುತ್ತಿದ್ದೇವೆ ಆದರೂ ಕೂಡ ಯಾವುದೇ ಬಸ್ ಬಂದಿಲ್ಲ ಇದರಿಂದ ನಮ್ಮ ಮನೆಗಳಿಗೆ ತಲುಪಲು ತೊಂದರೆ ಆಗುತ್ತಿದೆ ಅಧಿಕಾರಿಗಳು ಉದಾಸೀನತೆ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಕಚೇರಿಯ ಮುಂಬಾಗ ಪ್ರಯಾಣಿಕರು ಜಮಾವಣೆಗೊಂಡು ಗೊಂದಲದ ವಾತಾವರಣ ಉಂಟಾಯಿತು ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಲು ಅರಸಹಾಸ ಪಡಬೇಕಾಯಿತು
ಪರಿಸ್ಥಿತಿ ಅರಿತ ಅಧಿಕಾರಿಗಳು ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದರು
