ಪೋಲಿಸ್ ರಕ್ಷಣೆಯಲ್ಲಿ ಗ್ರಾಪಂ  ಅಧ್ಯಕ್ಷರ  ಆಯ್ಕೆ



ತಾಲೂಕಿನ 4 ಗ್ರಾಮ ಪಂಚಾಯಿತಿಗಳಿಗೆ ನಡೆದ ಅಧ್ಯಕ್ಷರ  ಚುನಾವಣೆಯ ಪೈಕಿ ಕೆ ವನಮಾಚನಹಳ್ಳಿಯ ಎರಡು ಗುಂಪುಗಳ ನಡುವೆ ಉಂಟಾದ ಗೊಂದಲದಿಂದ  ಪೊಲೀಸ್ ಬಂದೋಬಸ್ತ್ ನಲ್ಲಿ ಚುನಾವಣೆ ನಡೆಯಿತು

 ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಪರಸ್ಪರ ನಾಮಪತ್ರ ಸಲ್ಲಿಸಿದ್ದರು 
 ಆಯ್ಕೆ ಸಮಯದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಮಾತಿನ ಚಕಮುಕಿ ತಾರಕಕ್ಕೆ ಏರಿ ಕೈಕೈ ಮಿಲಾಯಿಸುವ ಅಂತಕ್ಕೆ ತಲುಪಿತ್ತು

 ಗಲಭೆಯನ್ನು ಹತೋಟಿಕೆ ತರಲು ಚುನಾವಣಾ ಅಧಿಕಾರಿ ಜೋಸೆಫ್  ಪ್ರಯತ್ನ ಪಟ್ಟರು ಕೂಡ ಪ್ರಯೋಜನವಾಗಲಿಲ್ಲ ನಂತರ ಪೊಲೀಸ್ ಬಂದು ಬಸ್ ನಲ್ಲಿ ಚುನಾವಣೆ ನಡೆಸಲಾಯಿತು
 ಅಧ್ಯಕ್ಷ ಸ್ಥಾನಕ್ಕೆ ರಕ್ಷಿತಾ ರಾಮ್ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ರೇಣುಕಮ್ಮ ಆಯ್ಕೆಯಾದರು.

 ಹುಲಿಯೂರುದುರ್ಗ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ರುದ್ರೇಗೌಡ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಗೌರಮ್ಮ ಆಯ್ಕೆಯಾದರು.

 ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಉಪಾಧ್ಯಕ್ಷರ ಸ್ಥಾನಕ್ಕೆ ಹಾಲಿಮಾಭಿ ಆಯ್ಕೆಯಾದರು
 ಕೊತ್ತಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಗೌತಮಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾದರೂ




 ಫೋಟೋ ಇದೆ ಕೆ ಹೊನ್ನಮಾಚನಹಳ್ಳಿ  ಗ್ರಾಮ ಪಂಚಾಯಿತಿಯಲ್ಲಿ  ಪೋಲಿಸ್ ಬಂದು ಬಸ್ ನಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆ