ಬೆಟ್ಟದ ರಂಗನಾಥನ ಆಚರಣೆಗಳು ಬದಲಾವಣೆ- ವಂಶಸ್ಥರಿಂದ ಆಕ್ರೋಶ
ದೇವಾಲಯದಲ್ಲಿ ನಡೆಯುವ ಪಾರಂಪರಿಕ ಪದ್ಧತಿಗೆ ಅಧಿಕಾರಿಯಿಂದ ತೊಂದರೆಯಾದ ಹಿನ್ನೆಲೆಯಲ್ಲಿ ಭಕ್ತರು ದೇವಾಲಯದ ಮುಂದೆ ಪ್ರತಿಭಟಿಸಿ ನಂತರ ತಾಸಿಲ್ದಾರ್ ಗೆ ಮನವಿ ಸಲ್ಲಿಸಿದ ಘಟನೆ ನಡೆಯಿತು
ತಾಲೂಕಿನ ಬೆಟ್ಟದ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಲ್ ಮಂಜುನಾಥ್ ಹಾಗೂ ಟ್ರಸ್ಟ್ ನ ವೆಂಕಟರಂಗಯ್ಯ ರವರ ನಡವಳಿಕೆ ಹಾಗೂ ಆಡಳಿತದಿಂದ ಭಕ್ತರಿಗೆ ತೊಂದರೆ ಆಗುತ್ತಿದೆ ಸಾಂಪ್ರದಾಯಿಕ ಪೂಜೆ ಗೆ ತೊಂದರೆ ನೀಡುತ್ತಿದ್ದಾರೆ ಎಂದು ದೇವಾಲಯದ ಮುಂದೆ ಪ್ರತಿಭಟಿಸಿದರು
ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದ ವಂಶಸ್ಥರು ಎನ್ನಲಾದ ವಿಜಯ, ಚಿನ್ನಸ್ವಾಮಿ, ವೆಂಕಟೇಶ್, ಪುಟ್ಟರಾಜು, ರಂಗಸ್ವಾಮಿ ಸೇರಿದಂತೆ ಹಲವಾರು ಭಕ್ತರುಗಳು ಪ್ರತಿಭಟಿಸಿದರು
ಶ್ರೀರಂಗಪ್ಪನವರ ಗದ್ದುಗೆ ಸಾಂಪ್ರದಾಯಿಕವಾಗಿ ತಳಿಗೆ ಪದ್ಧತಿಯಂತೆ ಮಾಂಸಹಾರ ನೈವೇದ್ಯ ಮಾಡಲಾಗುತ್ತದೆ
ಕೆಲವು ದಿನಗಳಿಂದ ಅಲ್ಲಿನ c ದರ್ಜೆಯ ನೌಕರ ಮಂಜುನಾಥ್ ಮಾಂಸ ನೈವೇದ್ಯ ಮಾಡದಂತೆ ಸ್ಥಳೀಯ ಅರ್ಚಕರಿಗೆ ಸೂಚನೆ ನೀಡಿದ್ದರು
ಇದರಿಂದ ಹಲವಾರು ಅರ್ಚಕರ ಹಾಗೂ ಭಕ್ತರ ಭಾವನೆಗಳಿಗೆ ನೋವು ಉಂಟಾಗಿತ್ತು ಈ ಸಂಬಂಧ ವಂಶಸ್ಥರಾದ ವಿಜಯ ವಿಚಾರ ತಿಳಿದು ದೇವಾಲಯಕ್ಕೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಕೆಲವು ಅರ್ಚಕರು ಮಾಂಸಾಹಾರ ನೈವೇದ್ಯ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದರಿಂದ ಭಕ್ತರ ಆಕ್ರೋಶಕ್ಕೆ ಕಾರಣವಾಯಿತು ಇದಕ್ಕೆ ಕಾರಣರಾದ ಮಂಜುನಾಥ್ ಮೇಲೆ ಹರಿಹಾಯ್ದು ಭ್ರಷ್ಟಾಧಿಕಾರಿಯನ್ನು ತಕ್ಷಣ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು
ದಾಸ ಮನೆತನದ ಕುಟುಂಬದ ಹಿರಿಯ ಸಮರಾಯ ರಂಗಪ್ಪ ಅವರ ಗದ್ದುಗೆ ಈ ದೇವಾಲಯದಲ್ಲಿ ಇದೆ ಅದೇ ಗದ್ದುಗೆಗೆ ಪುರಾತನ ಕಾಲದಿಂದ ಮಾಂಸಾಹಾರ ನೈವೇದ್ಯ ಮಾಡಲಾಗುತ್ತಿದೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಸಿ ದ್ದರ್ಜೆಯ ನೌಕರ ಮಂಜುನಾಥ್ ಮನಬಂದಂತೆ ಇಲ್ಲ ಸಲ್ಲದ ಕಾನೂನುಗಳನ್ನು ಮಾಡುತ್ತಾ ಭಕ್ತರ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ ಸ್ಥಳೀಯವಾಗಿ ಅರ್ಚಕರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ತಕ್ಷಣ ಆತನ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪುರಾತನ ಕಾಲದಿಂದ ದಾಸನಪುರ ಬೊಮ್ಮಡಿಗೆರೆ ಹಾಗೂ ಮುದುಕದ ಹಳ್ಳಿ ಗ್ರಾಮದ ಹಲವಾರು ಅರ್ಚಕರು ಇಲ್ಲಿ ಪೂಜೆ ಹಾಗೂ ಎಡೆ ಮಾಡಿಕೊಂಡು ಬರುತ್ತಿದ್ದಾರೆ ಅದನ್ನು ಮನಬಂದಂತೆ ಬದಲಾಯಿಸುವುದು ಸರಿ ಇಲ್ಲ ಯಾವುದೇ ಮೀಟಿಂಗ್ ಕರೆಯದೆ ಹಾಗೂ ವಂಶಸ್ಥರ ಗಮನಕ್ಕೆ ತರದೆ ಮಂಜುನಾಥ್ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಈ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು.
ದೇವಾಲಯ ಪ್ರವೇಶ ಸಂದರ್ಭದಲ್ಲಿ ಅರ್ಚಕರು ಹಾಗೂ ವಂಶಸ್ಥರ ನಡುವೆ ಕೆಲಕಾಲ ಮಾತಿನ ಚಕುಮುಕಿ ನಡೆಯಿತು
ನಂತರ ಕುಣಿಗಲ್ ತಾಸಿಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿ ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ರಂಗಸ್ವಾಮಿ ರವಿಕುಮಾರ್ ಕನಕರಾಜು ಕೃಷ್ಣಪ್ಪ ವೇಣುಗೋಪಾಲ್ ಜಿ ಆರ್ ನಾಗರಾಜು ಅನಂತರ ಸೇರಿದಂತೆ ಇತರರು ಇದ್ದರು.
ಫೋಟೋ ಇದೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದ ಮುಂದೆ ರಂಗನಾಥನ ವಂಶಸ್ಥ ಕುಟುಂಬದವರು