ಡಿಕೆ ಬಗ್ಗೆ ಗುಡುಗಿದ ಮಾಜಿ ಸಂಸದ
ನೀರಾವರಿ ಸಚಿವರಾಗಿ ಕುಣಿಗಲ್ ಗೆ ಯಾವುದೇ ಯೋಜನೆ ಮಾಡದ ಡಿಕೆ ಶಿವಕುಮಾರ್ ಈಗ ಚುನಾವಣೆ ಗಾಗಿ ನೀರಾವರಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದು ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ ಆರೋಪಿಸಿದ್ದಾರೆ
ತಾಲೂಕಿನ ಗಡಿ ಭಾಗದ ತಮ್ಮ ತೋಟದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ನೀರಾವರಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಸಂಸದರಾಗಿದ್ದ ಡಿಕೆ ಸುರೇಶ್ ಹಾಗೂ ಶಾಸಕರಾದ ಡಾ. ರಂಗನಾಥ್ ತಮ್ಮ ಅಧಿಕಾರ ಅವಧಿಯಲ್ಲಿ ಕುಣಿಗಲ್ ಗೆ ಯಾವುದೇ ನೀರಾವರಿ ಯೋಜನೆ ಮಾಡಿಲ್ಲ ಎಂದರು.
ಮಂಗಳ ಮತ್ತು ಮರ್ಕೋನಹಳ್ಳಿ ಜಲಾಶಯಗಳ ಲಿಂಕ್ ಕೆನಾಲ್ ಯೋಜನೆಯನ್ನು ಕೂಡ ಮಾಡಲು ಆಗದ ಅವರು ನೀರಾವರಿ ವಿಚಾರವನ್ನು ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕುಣಿಗಲ್ ಕೆರೆ ಲಿಂಕ್ ಕೆನಾಲ್ ಯೋಜನೆಯನ್ನು ಆಗಿಂದಾಗೆ ಪ್ರಸ್ತಾಪ ಮಾಡುತ್ತಾ ತಮ್ಮ ರಾಜಕೀಯ ಜೀವನವನ್ನು ಉಳಿಸಿಕೊಂಡು ಬಂದಿದ್ದಾರೆ ಈ ಲಿಂಕ್ ಕೆನಾಲ್ ಇಂದ ಕುಣಿಗಲ್ ತಾಲೂಕಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಇದರಿಂದ ಬಿಜೆಪಿ ಸರ್ಕಾರ ನಾಲೆ ಆಧುನಿಕರಣ ಕಾಮಗಾರಿಯನ್ನು ಮಾಡುತ್ತಿದೆ,
ಈ ಕಾಮಗಾರಿಯಿಂದ ಎಡೆಯೂರು ಹೋಬಳಿ ಭಾಗದ ಕೆರೆಗಳು ಮತ್ತು ಕಸಬಾ ಹಾಗೂ ಉತ್ರಿದುರ್ಗದ ಕೆರೆಗಳಿಗೆ ಅನುಕೂಲವಾಗುತ್ತದೆ ಎಂದರು.
ಶ್ರೀರಂಗ ಏತ ನೀರಾವರಿ ಎಂಬುದು ಡಿಕೆ ಕುಟುಂಬ ಹಣ ಮಾಡಲು ಹಾಕಿಕೊಂಡ ಒಂದು ಭೋಗಸ್ ಯೋಜನೆ ಇದರಿಂದ ಹಣ ಮಾಡುತ್ತಾರೆ ಹೊರತು ನೀರಾವರಿ ಪ್ರಯೋಜನವಿಲ್ಲ ಎಂದರು.
ನಾಳೆ ಆಧುನಿಕರಣಗೊಂಡು ಹೆಚ್ಚು ನೀರು ಕುಣಿಗಲ್ ಭಾಗಕ್ಕೆ ಹರಿಯುತ್ತದೆ ಇದರಿಂದ ಸಂಪೂರ್ಣ ಕುಣಿಗಲ್ ಪ್ರದೇಶ ನೀರಾವರಿ ಆಗುವುದು ಖಚಿತ ಶ್ರೀರಂಗ ಏತ ನೀರಾವರಿಯಿಂದ ಯಾವುದೇ ಪ್ರಯೋಜನವಿಲ್ಲ ಅದು ಬೇರೆ ಭಾಗಕ್ಕೆ ನೀರು ಕೊಂಡು ಹೋಗಲು ಇವರು ಮಾಡುತ್ತಿರುವ ಸಂಚು ಎಂದರು
