ಬ್ರಿಟನ್ ಪ್ರಧಾನಿಯಾಗಿ ಹಬ್ಬ ಆಚರಿಸಿದ ಬಡ ವ್ಯಾಪಾರಿ
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗಾಗಿ ಕುಣಿಗಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಬ್ಯಾನರ್ ಹಾಕಿದ್ದ ಬೀದಿಯ ಬಡ ವ್ಯಾಪಾರಿ ಕೇ ನಿ ಚಂದ್ರಶೇಖರ್
ಪ್ರತಿನಿತ್ಯ ಊರು ಊರು ಮೇಲೆ ಚಕ್ಕುಲಿ, ನಿಪ್ಪಟ್ಟು, ಸಿಹಿ ತಿಂಡಿಗಳನ್ನು ಮಾರಿ ತನ್ನ ತುತ್ತಿನ ಚೀಲ ತುಂಬಿಸುವ ಈ ಚಂದ್ರಶೇಖರ್ ದೇಶದ ಹುಡುಗನೊಬ್ಬ ಇನ್ನೊಂದು ದೇಶಕ್ಕೆ ಪ್ರಧಾನಿ ಆಗಿದ್ದಾನೆ ಎಂದು ಸಂತಸ ಪಡುವ ಮುಖಾಂತರ ಹಬ್ಬ ಆಚರಿಸಿದರು.
ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಬ್ಯಾನರ್ ಕಟ್ಟಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೆ ಶುಭವಾಗಲಿ ಎಂದು ಶುಭಾಶಯ ಕೋರಿದರು.
ವೃತ್ತದಲ್ಲಿ ಪಟಾಕಿ ಸಿಡಿಸಿ ಅಲ್ಲಿಗೆ ಬಂದ ನೂರಾರು ಸಾರ್ವಜನಿಕರಿಗೆ ಸಿಹಿ ಹೋಳಿಗೆ ಹಂಚುವ ಮುಖಾಂತರ ಬ್ರಿಟಿಷ್ ಪ್ರಧಾನಿ ಯಾ ಗುಣಗಾನ ಮಾಡಿದರು.
ಕಾಲ ಒಂದರಲ್ಲಿ ಭಾರತದ ಮೇಲೆ ಬ್ರಿಟಿಷರು ದಾಳಿ ಮಾಡಿ ನಮ್ಮನ್ನು ಆಳ್ವಿಕೆ ಮಾಡಿದ್ದರು ಆದರೆ ಈಗ ನಾವು ಬ್ರಿಟಿಷರ ದೇಶವನ್ನು ಆಳುತ್ತಿದ್ದೇವೆ ಎಂದು ಹೆಮ್ಮೆಯಿಂದ ಸಾರ್ವಜನಿಕಗೆ ಸಂತಸ ಹಂಚಿಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ
ಕೇ ನಿ ಚಂದ್ರಶೇಖರ್ ನನ್ನ ತಾತಂದಿರಾದ ಕೆ ನಂಜಯ್ಯ ಮತ್ತು ಡಿ ಯಲ್ಲಪ್ಪ ಸ್ವಾತಂತ್ರ ಹೋರಾಟಗಾರರಾಗಿ ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಬ್ರಿಟಿಷ್ ದೇಶವನ್ನು ಆಳುತ್ತಿರುವ ನಮ್ಮ ಹುಡುಗ ನಮ್ಮ ಭಾರತೀಯ ಕರ್ನಾಟಕದ ಅಳಿಯ ಎಂದೆಲ್ಲ ಸಾರ್ವಜನಿಕರಿಗೆ ಮನವರಿಕೆ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಇದು ಸತ್ಯವಾದ ಸಂತೋಷದ ವಿಚಾರ ಅದಕ್ಕಾಗಿ ನನ್ನ ಸಂಭ್ರಮಾಚರಣೆಯನ್ನು ಸಾರ್ವಜನಿಕವಾಗಿ ಮಾಡುತ್ತಿದ್ದೇನೆ ಎಂದರು
ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಬ್ರಿಟಿಷ್ ಪ್ರಧಾನಿಗಾಗಿ ಸಿಹಿ ಹಂಚಿದ ಫುಟ್ಪಾತ್ ವ್ಯಾಪಾರಿ
ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ
ಧನ್ಯವಾದಗಳು
