ಮಾರ್ಕೋನಹಳ್ಳಿ ಜಲಾಶಯ ಮತ್ತೊಮ್ಮೆ ಕೋಡಿ ಆಗಿದೆ ನೋಡಿ
ಕಳೆದ ಹಲವಾರು ದಿನಗಳಿಂದ ಮಾರ್ಕೋನಹಳ್ಳಿ ಜಲಾಶಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮವಾದ ಮಳೆ ಸುರಿಯುತ್ತಿದೆ.
ಮಳೆಯ ರಭಸಕ್ಕೆ ಗ್ರಾಮದ ಸಣ್ಣಪುಟ್ಟ ಕೆರೆ ಕಟ್ಟೆಗಳು ಈಗಾಗಲೇ ಕೋಡಿ ಆಗುತ್ತಿವೆ.
ಅದರಂತೆ ಕೂಡ ವಿಶ್ವ ವಿಖ್ಯಾತ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಾಣ ಆಗಿರುವ ಮಾರ್ಕೋನಹಳ್ಳಿ ಜಲಾಶಯ ವರ್ಷದಲ್ಲಿ ಮತ್ತೊಮ್ಮೆ ಕೋಡಿಯಾಗಿದೆ.
ಕೋಡಿ ಆಗಿರುವ ವಿಚಾರ ರೈತರೂ ಸೇರಿದಂತೆ ಇಲ್ಲಿಗೆ ಆಗಮಿಸುವ ಪ್ರೇಕ್ಷ ಕರನ್ನು ಸಂತೋಷ ಪಡಿಸುತ್ತಿದೆ.
ಕಳೆದ ಬಾರಿ ಕೆರೆ ಕೋಡಿ ಸಮಯದಲ್ಲಿ ಇಲ್ಲಿಗೆ ಆಗಮಿಸಿದ ಕೆಲವು ಪ್ರವಾಸಿಗರು ಇಕ್ಕಟ್ಟಿಗೆ ಸಿಲುಕಿ ಕೆಲವರಿಗೆ ಪ್ರಾಣ ನಷ್ಟವಾಗಿತ್ತು.
ಪುನಃ ರಾಜ್ಯದ ವಿವಿಧ ಭಾಗಗಳಿಂದ ಪ್ರೇಕ್ಷಣೀಯ ದಂಡು ಆಗಮಿಸಲಿದ್ದು ತಾಲ್ಲೂಕು ಹಾಗೂ ಜಿಲ್ಲಾಡಳಿತ ಸರ್ಕಾರ ಸೂಕ್ತ ಕ್ರಮ ವಹಿಸಬೇಕು