ಬರದ ನಾಡು ಶಿರಾ ದಲ್ಲಿ ಕಾಶ್ಮೀರಿ ಆಪಲ್ ಬೆಳೆ 80 ಲಕ್ಷದ ಆದಾಯ ಕ್ರಾಂತಿವೀರ



ಬರದ ನಾಡು ಶಿರಾ ದಲ್ಲಿ 
ಕಾಶ್ಮೀರಿ ಆಪಲ್ ಬೆಳೆ
80 ಲಕ್ಷದ ಆದಾಯ ಕ್ರಾಂತಿವೀರ!!
ಆಪಲ್ ಎಂದರೆ ಎಲ್ಲರಿಗೂ ಬಲು ಪ್ರೀತಿ ಆದರೆ ಅದನ್ನು ಶಿರಾ ದಂತಹ ಬರದ ಭೂಮಿಯಲ್ಲಿ ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ?
ಹೌದು ಶಿರಾ ತಾಲ್ಲೂಕಿನ ಭೀಕರ ಬರಗಾಲದಂತಹ ಭೂಮಿಯಲ್ಲಿ ಭಾರತೀಯ ಕಿಸಾನ್ ಸಂಘದ ಕ್ರಾಂತಿವೀರ ಕಾಶ್ಮೀರಿ ಆಪಲ್ ಬೆಳೆದು ಸಾಹಸ ಮಾಡಿದ್ದಾರೆ ವರ್ಷಕ್ಕೆ ₹ 80 ಲಕ್ಷ ಆದಾಯವನ್ನು 600 ಗಿಡಗಳಿಂದ ಸಂಪಾದಿಸುವ ಗುರಿ ಹೊಂದಿದ್ದಾರೆ.
ತಮ್ಮ ಅಕ್ಕನ 2.5 ಎಕರೆ ಜಾಗದಲ್ಲಿ 12*12 
ಅಂತರದಂತೆ 600 ಗಿಡ ಬೆಳೆದು ಹನಿನೀರಾವರಿ ಮಾಡಿ ರಾಸಾಯನಿಕ ಗೊಬ್ಬರಗಳಿಂದ ತಮ್ಮ ಸೇಬಿನ ತೋಟವನ್ನು ಮುಕ್ತವಾಗಿರಿಸಿದ್ದಾರೆ.


ಜೀವಾಮೃತ ಗೋ ಕೃಪಾಮೃತ ಸೇರಿದಂತೆ ವಿವಿಧ ರಾಸಾಯನಿಕ ಮುಕ್ತ ಸಾವಯವ ಪದ್ಧತಿಯಿಂದ ಆಪಲ್ ತೋಟವನ್ನು ನಿರ್ವಹಣೆ ಮಾಡಿದ್ದು ಮುಂದಿನ ವರ್ಷ ₹ 80 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.


ರೈತರ ಸಂಪರ್ಕ ಸಂಖ್ಯೆ 9663388081
ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಹೊಸಳ್ಳಿ ಗ್ರಾಮ ಪಂಚಾಯಿತಿಯ ಯಾದಲಡಕು ಗ್ರಾಮದ ನಿವಾಸಿ ಕ್ರಾಂತಿವೀರ