ಚಿನ್ನದ ಬೆಲೆಯ ನಿಂಬೆಗೆ ತಂತ್ರವಿದ್ಯೆ ಮಾಡಿದ ಯುವಕ!!?
ಬೇಸಿಗೆ ಅಧಿಕ ಆಗುತ್ತಿದೆ ಪ್ರತಿಯೊಬ್ಬರು ಕೂಡ ನಿಂಬೆ ಶರಬತ್ತು ಕುಡಿಬೇಕು ಎಂಬುವ ಆಸೆಯಲ್ಲಿದ್ದಾರೆ,
ನಿಂಬೆ ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋದಾಗ ಬಿಸಿಲಿಗಿಂತ ಹೆಚ್ಚು ಕೈ ಹಾಗೂ ಜೇಬನ್ನು ಬಿಸಿ ಮಾಡುವುದು  ಈ ನಿಂಬೆ ಹಣ್ಣಿನ ಬೆಲೆ,
ಈ ಸಮಸ್ಯೆಯಿಂದ ಬೇಸತ್ತ ಯುವಕನೊಬ್ಬ ಪ್ರತಿದಿನ ಶಕ್ತಿ ದೇವತೆ ದೇವಾಲಯದ ಬಳಿ ನಿಂಬೆಹಣ್ಣು ಗಳನ್ನು ತಂತ್ರವಿದ್ಯೆ ಮಾಡುವ ಮುಖಾಂತರ ದೇವರಿಗೆ ಅರ್ಪಿಸಿ ದರ ಕಡಿಮೆ ಮಾಡುವಂತೆ ಪ್ರೇರೇಪಿಸುತ್ತಿದ್ದಾನೆ,
ಹೌದು ಇದು ಆಶ್ಚರ್ಯವಾದರೂ ಸತ್ಯ  ಕುಣಿಗಲ್ ಪಟ್ಟಣದ ವಾಸಿ ಕಾರ್ತಿಕ್ ಎಂಬ ಯುವಕ ಈತ ದೈವಭಕ್ತ ನಿಂಬೆ ಹಣ್ಣಿನ ದರ ದಿಂದ ಬೇಸತ್ತು ಪ್ರತಿದಿನ ದೇವರಿಗೆ ನಿಂಬೆ ಹಣ್ಣು ಅರ್ಪಿಸಿ ದರ ಕಮ್ಮಿ ಮಾಡುವಂತೆ ಪ್ರಾರ್ಥಿಸುತ್ತಿದ್ದಾನೆ,
ಕಳೆದ 1ವಾರದಿಂದ ಈ ರೀತಿ ನಿಂಬೆಹಣ್ಣಿನ ತಂತ್ರವಿದ್ಯೆ ಮಾಡುತ್ತಿದ್ದು ಕೆಲವೇ ದಿನಗಳಲ್ಲಿ ನಿಂಬೆ ಹಣ್ಣಿನ ದರ ಇಳಿಯುತ್ತದೆ ಎಂಬುದು ಆತನ ವಾದ,
ಆತನ ಭಕ್ತಿಗೆ ಭಗವಂತ ಒಲಿದು ನಿಂಬೆ ಹಣ್ಣಿನ ದರ 15 ರಿಂದ  5 ರೂಪಾಯಿಗಳಿಗೆ  ಕಡಿಮೆ ಮಾಡುತ್ತಾರೆ ಎಂಬುದು ಆತನ ನಂಬಿಕೆ, 
ಕಲಿಯುಗದಲ್ಲಿ ಈತನ ಭಕ್ತಿಗೆ ಮೆಚ್ಚಿದ ಭಗವಂತ ನಿಂಬೆಹಣ್ಣಿನ ಬೆಲೆ ಕಡಿಮೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ!!!