ಸಿಡಿಲಿಗೆ 30 ತೆಂಗು ನಾಶ- ಪರಿಹಾರದ ಹಣ ₹ 180 ರೈತ  ಶಾಕ್


ಸಿಡಿಲಿನ ಬಡಿತಕ್ಕೆ ರೈತನ ಐವತ್ತು ತೆಂಗಿನ ಮರಗಳು ನಾಶವಾಗಿವೆ ತೆಂಗಿನ ತೋಟವನ್ನು ನಂಬಿ ಜೀವನ ನಡೆಸುತ್ತಿದ್ದ ರೈತ ಪರಿಹಾರಕ್ಕಾಗಿ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಆತನಿಗೆ ನಿಜವಾಗಲೂ ಶಾಕ್ ಆಗಿತ್ತು.

ಹೌದು ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿಯ ಗೌಡಗೆರೆ ಗ್ರಾಮದ ಕೃಷ್ಣಪ್ಪ ಎಂಬುವರಿಗೆ ಸೇರಿದ ಸರ್ವೇ ನಂಬರ್ 26 ರಲ್ಲಿ 2 ಎಕರೆ ಜಮೀನಿದೆ ಈ ಜಮೀನಿನಲ್ಲಿ ಕಳೆದ ವಾರ ಇಂತಹ ದುರ್ಘಟನೆ ನಡೆದಿದೆ.

ತನ್ನ ತೋಟದಲ್ಲಿ ಸಿಡಿಲಿನ ಹೊಡೆತಕ್ಕೆ ಸುಮಾರು ಮೂವತ್ತರಿಂದ ಐವತ್ತು ತೆಂಗಿನ ಮರಗಳು ಹಾನಿಗೊಳಗಾಗಿವೆ ಈ ಘಟನೆಯಿಂದ ರೈತ ವಿಚಲಿತನಾಗಿದ್ದ.

ಚಿಂತನೆಯಲ್ಲಿ ತೊಡಗಿದ್ದ ರೈತನಿಗೆ ಸರಕಾರ ಪ್ರಕೃತಿ ವಿಕೋಪದ ಪರಿಹಾರದಡಿ ನಿಮಗೆ ಸಹಾಯ ಮಾಡುತ್ತದೆ ಎಂದು ಕೆಲವರು ಹೇಳಿದ ಮಾತುಗಳು ಆತನಿಗೆ ಸಮಾಧಾನ ತಂದಿದ್ದವು.

ಪರಿಹಾರದ ಹಣ ಪಡೆಯಲು ಕುಣಿಗಲ್ ನ ತಾಲ್ಲೂಕು ಕಚೇರಿ ಹಾಗೂ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿದಾಗ ಆತನಿಗೆ ನಿಜವಾದ ಶಾಕ್ ಕಾದಿತ್ತು.

ತೋಟಗಾರಿಕಾ ಇಲಾಖೆ ಪ್ರತಿ ಮರಕ್ಕೆ ನೂರ ಎಂಬತ್ತು ರೂ ಅಂದರೆ ಪ್ರತಿ ಗುಂಟೆಗೆ ನೂರ ಎಂಬತ್ತು ರೂ ಕೊಡುವುದಾಗಿ ತಿಳಿಸಿದರು ಇದರಿಂದ ರೈತನಿಗೆ ಇನ್ನಷ್ಟು ನೋವಾಗಿತ್ತು.

ಸರ್ಕಾರ ನೀಡುವ ಪರಿಹಾರದ ಹಣದಲ್ಲಿ 1ತೆಂಗಿನ ಗಿಡವನ್ನು ಖರೀದಿ ಮಾಡಲು ಸಾಧ್ಯವಿಲ್ಲ ಬಸ್ ಚಾರ್ಜು ಊಟ ತಿಂಡಿ ಸೇರಿದಂತೆ ಆತನ ಕೂಲಿ ಹಣ ಕೂಡ ಲಭಿಸುವುದಿಲ್ಲ .

ಈ ರೀತಿ ಪರಿಹಾರದ ಹಣ ನೀಡುವ ಬದಲು ಸರಕಾರ ಒಂದಿಷ್ಟು ಯೋಚನೆ ಮಾಡಬೇಕು ಅಧಿಕಾರಿಗಳು ಪರಿಶೀಲನೆ ಮಾಡಿ ರೈತರಿಗೆ ಹತ್ತು ರಿಂದ 5ಸಾವಿರ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾ