ಸರ್ಕಾರದಿಂದ ಜೇನುಪೆಟ್ಟಿಗೆ ಪಡೆಯುವುದು ಹಾಗೂ ನಿರ್ವಹಣೆ 

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಗ್ರಾಮ ದಲ್ಲಿ ತೆಂಗು ಬೆಳೆಗಾರರ ಕಂಪೆನಿ ಸಹಯೋಗದೊಂದಿಗೆ ಬೆಂಗಳೂರಿನ  ತರಬೇತಿ ಸಂಸ್ಥೆಯಾದ RICM ಹಾಗು GKVK ಸಹಕಾರದಿಂದ ವೈಜ್ಞಾನಿಕ ಜೇನು ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.


RICM ನ ಸಹಾಯಕ ನಿರ್ದೇಶಕರಾದ ರವಿಚಂದ್ರನ್ GKVK ಯ ಜೇನು ವಿಭಾಗದ ಮುಖ್ಯಸ್ಥರಾದ ಡಾ ಜಗದೀಶ್ ಮತ್ತು ಪ್ರೊಫೆಸರ್ ಡಾಕ್ಟರ್ ಈಶ್ವರಪ್ಪ, ಶಂಕರ್ ನಾರಾಯಣ್, ಹಾಗೂ 


ತೆಂಗು ಕಂಪೆನಿಯ ನಿರ್ದೇಶಕರಾದ ಎನ್ ಎಸ್ ವಸಂತ್ ಕುಮಾರ್ ತರಬೇತಿ ಯಲ್ಲಿ ಭಾಗವಹಿಸಿದ್ದರು.

ತೋಟಗಾರಿಕಾ ಅಧಿಕಾರಿ ನವೀನ್ ತರಬೇತಿಯಲ್ಲಿ ಭಾಗವಹಿಸಿ ಜೇನು ಸಾಕಾಣಿಕೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.