ಕಾಂಗ್ರೇಸ್ ಮುಖಂಡ ಮುದ್ದಹನುಮೇಗೌಡರನ್ನು ಬಿಜೆಪಿಗೆ ಸ್ವಾಗತಿಸಿದ 

ಡಿ ಕೃಷ್ಣಕುಮಾರ್

ಕುಣಿಗಲ್ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಬರುವುದಾದರೆ ನಾನು ಸ್ವಾಗತಿಸುತ್ತೇನೆ ಎಂದರು.

ಕುಣಿಗಲ್ ತಾಲ್ಲೂಕಿನಲ್ಲಿ  ರಾಜಕೀಯ ಚುರುಕಾಗಿದೆ ಮಾಜಿ ಸಂಸದ 
S P ಮುದ್ದಹನುಮೇಗೌಡರು ಕುಣಿಗಲ್ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ,

ಕಾಂಗ್ರೆಸ್ ಪಕ್ಷದಿಂದ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡರು ಕುಣಿಗಲ್ ಮುಂದಿನ MLA ಟಿಕೆಟ್ ಕೇಳುತ್ತಿದ್ದಾರೆ,
ಇದರಿಂದ ಕಾಂಗ್ರೆಸ್ ನಲ್ಲಿ ಗೊಂದಲದ ವಾತಾವರಣ ಉಂಟಾಗಿದೆ. ಹಾಲಿ ಶಾಸಕ ಡಾಕ್ಟರ್ ರಂಗನಾಥ್ ಅವರಿಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಕೈ ತಪ್ಪಬಹುದೆಂಬ ಭಯದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ SBM ಬಿಜೆಪಿಯ ಟಿಕೆಟ್ ಕೇಳುತ್ತಿದ್ದಾರೆ ಎಂದು ಕಾಂಗ್ರೆಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದರೆ ಎಸ್ ಪಿ ಮುದ್ದಹನುಮೇಗೌಡರು ಬಿಜೆಪಿಯ ಸಂಸದರ ಕ್ಷೇತ್ರಕ್ಕೆ ಬರುವುದಾದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮ್, ಹಿರಿಯ ವಕೀಲರಾದ ಸತ್ಯನಾರಾಯಣ್ ಒಡೆಯರ್ . ಕಾರ್ಯದರ್ಶಿ ದೀಲಿಪ್,ಯಡಿಯೂರು ತಿಮ್ಮೇಗೌಡ.ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು

ಇನ್ನಷ್ಟು ಸ್ವಾರಸ್ಯಕರ ಸುದ್ದಿಗೆ ವಿಡಿಯೋ ನೋಡಿ 👇