ಸ್ಟಡ್ ಫಾರಂ ನಾಮಫಲಕಕ್ಕೆ ಮಸಿ ಬಳಿದ ಕುಣಿಗಲ್ ಸಾರ್ವಜನಿಕರು



ಕನ್ನಡ ಭಾಷೆ ಬಳಸದ ಕುಣಿಗಲ್ ಸ್ಟಡ್ ಫಾರಂನ ನಾಮಫಲಕಕ್ಕೆ ವಕೀಲ ಗಂಗಾಧರ್ ಸೇರಿದಂತೆ ಹಲವಾರು ಮಂದಿ ಕಪ್ಪು ಬಣ್ಣ ಬಳಿಯುವ ಮುಖಾಂತರ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನಡೆಸಿದರು.
ಈ ಹಿಂದೆ ಪುರಸಭೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಅವರು ಕ್ರಮ ವಹಿಸಿರಲಿಲ್ಲ ಆದ್ದರಿಂದ ಈ ಕೆಲಸ ಮಾಡಿದ್ದೇವೆ ಎಂದರು.

ಮುಂದಿನ ಹದಿನೈದು ದಿನಗಳೊಳಗೆ ಕುಣಿಗಲ್ ನಲ್ಲಿ ಕನ್ನಡ ನಾಮ ಫಲಕಗಳನ್ನು ಹಾಕುವಂತೆ ಪುರಸಭೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.