ಕಳ್ಳನ ಮೇಲೆ ಅರಣ್ಯಾಧಿಕಾರಿ ನಡೆಸಿದ ಎನ್ಕೌಂಟರ್ ಸ್ಥಳದಲ್ಲಿ ಒಬ್ಬ ಬಲಿಯಾದ


ಕುಣಿಗಲ್:- ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕಂಪ್ಲಾಪುರ ಅರಣ್ಯದಲ್ಲಿ 
ಶ್ರೀ ಗಂಧದ ಮರ ಕದಿಯುತ್ತಿದ್ದ  ಕಳ್ಳನ ಮೇಲೆ ಅರಣ್ಯಾಧಿಕಾರಿ ನಡೆಸಿದ ಎನ್ಕೌಂಟರ್ ಸ್ಥಳದಲ್ಲಿ ಒಬ್ಬ ಬಲಿಯಾದ ಘಟನೆ ನಡೆದಿದೆ.


 ಕಂಪಲಾಪುರ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಗ್ಗಿನ ಜಾವ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕದಿಯಲು ಬಂದಿದ್ದ ಐವರು ಕಳ್ಳರ ಪೈಕಿ ಒಬ್ಬ ಬಲಿಯಾಗಿದ್ದು ಉಳಿದವರು ತಲೆಮರೆಸಿಕೊಂಡಿದ್ದಾರೆ.

ಮಾರಕಾಸ್ತ್ರಗಳ ಜೊತೆಯಲ್ಲಿ ಬಂದ ಕಳ್ಳರು ಅರಣ್ಯ ಪ್ರದೇಶದಲ್ಲಿ  ಶ್ರೀಗಂಧದ ಮರವನ್ನು ಕದಿಯುತ್ತಿದ್ದರು ಎನ್ನಲಾಗಿದ್ದು.

ಬೆಳಗಿನ ಜಾವ  ಅರಣ್ಯದಲ್ಲಿ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ಅರಣ್ಯಾಧಿಕಾರಿ ಮಹೇಶ್ ಮತ್ತು ಅವರ ತಂಡಕ್ಕೆ ಶ್ರೀಗಂಧ ಕಡಿಯುತ್ತಿರುವ ವಿಚಾರ ತಿಳಿದು ಕಳ್ಳರನ್ನು ಬಂಧಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಯ ಮೇಲೆ ಕಳ್ಳರು ಮಚ್ಚಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಅನಿವಾರ್ಯವಾಗಿ ಪ್ರಾಣ ರಕ್ಷಣೆಗೋಸ್ಕರ ಅರಣ್ಯಾಧಿಕಾರಿ ಕಳ್ಳರ ಮೇಲೆ ಗುಂಡು ಹಾರಿಸಿದ್ದಾರೆ.
 

 ಗುಂಡೇಟಿಗೆ ಸ್ಥಳದಲ್ಲಿ ವೆಟ್ ಕಳ್ಳ ಮೃತಪಟ್ಟಿದ್ದು ಮತ್ತೆ ಇತರರು ಪರಾರಿಯಾಗಿದ್ದಾರೆ.
 ಮೃತಪಟ್ಟ ವ್ಯಕ್ತಿಯ ಸ್ಥಳ ಮತ್ತು ಹೆಸರು ಇನ್ನೂ ತಿಳಿದು ಬಂದಿಲ್ಲ.

ಕಳ್ಳರ ಬಳಿಯಿದ್ದ ಮಾರಕಾಸ್ತ್ರಗಳಿಂದ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದರಿಂದ ಗಾಯಗೊಂಡು ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಇನ್ನು ಕೆಲವರು ತಪ್ಪಿಸಿಕೊಂಡಿದ್ದಾರೆ ಅರಣ್ಯ ಅಧಿಕಾರಿ ಮತ್ತು ಹುಲಿಯೂರುದುರ್ಗ ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ  ಬಲೆ ಬೀಸಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ತುಮಕೂರು ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಸಿದ್ದಾರೆ.