ಪ್ರಚಾರಕ್ಕಾಗಿ ಬೀದಿಗಿಳಿದ DYSP ರಮೇಶ್
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ಹೊಸದಾಗಿ ಬಂದ 112 ವಾಹನವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕುಣಿಗಲ್ ಡಿವೈಎಸ್ಪಿ ರಮೇಶ್  ಮಾತನಾಡಿದಾರು.
 ಹುಲಿಯೂರುದುರ್ಗದ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. 112 ಕಾಲ್ ಮಾಡಿ ನೀವು ಇರುವ ಸ್ಥಳಕ್ಕೆ ಈ ವಾಹನ ಬರುತ್ತೆದೆ. ಮೊದಲು ದೇಶದಲ್ಲಿ  ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ಆಂಬುಲೆನ್ಸ್ ಸೇವೆಗಳಿಗಾಗಿ ಬೇರೆ ಬೇರೆ ಸಂಖ್ಯೆಗೆ ಕರೆ ಮಾಡಬೇಕಾಗಿತ್ತು. ಇದೀಗ ಎಲ್ಲ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ ಗೊತ್ತುಪಡಿಸಲಾಗಿದೆ. ತುರ್ತು ಸಮಯದಲ್ಲಿ ತೊಂದರೆಗೊಳಗಾದ ವ್ಯಕ್ತಿಯನ್ನು ಮೊದಲು ಪೊಲೀಸ್ ಸಿಬ್ಬಂದಿಯೇ ಸಂಪರ್ಕಿಸಲಿದ್ದಾರೆ. ಅಪಘಾತ, ಅಪರಾಧ ಹಾಗೂ ವಿಪತ್ತು ಸಂಭವಿಸಿದಾಗ ಆ ಸ್ಥಳಕ್ಕೆ ಬಂದು ತಕ್ಷಣಕ್ಕೆ ಬೇಕಾದ ನೆರವು ನೀಡಿ ರಕ್ಷಣೆ ಮಾಡಲಿದ್ದಾರೆ ಎಂದು ಮಾತನಾಡಿದರು.
