ಕುಣಿಗಲ್ ಪಟ್ಟಣದ ಪುರಸಭಾ ಸಾಮಾನ್ಯ ಸಭೆಯಲ್ಲಿ ವಾಗ್ವಾದಕ್ಕೊಳಗಾದ ಖಾತೆ ಮತ್ತು ಕಂದಾಯ 

  

ಪಟ್ಟಣದ ಪುರಸಭೆಯ ಸಾಮಾನ್ಯ ಸಭೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತುನಡೆಯಿತು.
ಸಭೆಯಲ್ಲಿ  ಬಿಜೆಪಿ ಸದಸ್ಯರು ಕೇಸರಿ ಶಾಲು ಗಳು ಸಮೇತ ಬಂದು  ಸಭೆಯ  ಗಮನ ಸೆಳೆದರು.

ಈ ಸಂದರ್ಭದಲ್ಲಿ ಕೇಸರಿ ಮುಖಂಡರಾದ ಕೃಷ್ಣ ಹಲವಾರು ವಿಚಾರಗಳನ್ನು ಮುಂದಿಟ್ಟು ವಾಗ್ವಾದಕ್ಕಿಳಿದರು.
ಪುರಸಭೆಯ ಕಂದಾಯ ವಸೂಲಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಬಡವರೇ ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.


ಕುಣಿಗಲ್ ದೊಡ್ಡಕೆರೆ ನೀರಿನ ವಿಚಾರ ಬಂದಾಗ ಅದು ಅಶುದ್ಧವಾಗಿದೆ ಅದನ್ನು ಖಾಲಿ ಮಾಡಬೇಕೆಂದು ಪುರಸಭೆ ಸಭೆಯಲ್ಲಿ ಒತ್ತಾಯಿಸುವುದನ್ನು ಮರೆಯಲಿಲ್ಲ.

ಹೀಗೆ ಹಲವಾರು ವಿಚಾರಗಳು ಚರ್ಚೆಗೆ ಬಂದರೂ ಕೂಡ ಸಭೆ ಗೊಂದಲದ ಗೂಡಾಗಿ ಮಧ್ಯಾಹ್ನದವರೆಗೆ ನಡೆಯಿತು 
ಪುರಸಭಾ ಮುಖ್ಯಾಧಿಕಾರಿ ರವಿಕುಮಾರ್ ಸೇರಿದಂತೆ ಹಲವಾರು ಸದಸ್ಯರು ಸಭೆಯಲ್ಲಿ
 ಭಾಗವಹಿಸಿದ್ದರು.