ಕುಣಿಗಲ್ ಸರ್ಕಾರ ನಿಗದಿ ಪಡಿಸಿದ ಹೇಮಾವತಿ ನೀರು ತರಲು ಕುಣಿಗಲ್ ಶಾಸಕರು ವಿಫಲರಾಗಿದ್ದಾರೆ ಎಂದು ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆನಂದ್ ಪಾಟೀಲ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
 ತುಮಕೂರು ಜಿಲ್ಲೆಗೆ 23 ಟಿಎಂಸಿ ನೀರನ್ನು ಸರ್ಕಾರ ಬಿಡುಗಡೆ ಮಾಡಿದೆ, ತಾಲೂಕಿಗೆ 3 ಟಿಎಂಸಿ ನೀರನ್ನು ಸರ್ಕಾರ ಆದೇಶ ಮಾಡಿದೆ, ಅಧಿಕಾರಿಗಳಿಗೆ ಅದು ಲೆಕ್ಕಪತ್ರ ಗಳಿಗೆ ಮಾತ್ರ ಸೀಮಿತವಾಗಿದೆ.
ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ ಕಾರ್ಯಕ್ರಮ ತಲ್ಲೀನರಾಗಿದ್ದಾರೆ, ತಾಲ್ಲೂಕಿನಲ್ಲಿ  ಅಭಿವೃದ್ಧಿ ಕೆಲಸದಲ್ಲಿ  ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸುಮಾರು ವರ್ಷಗಳ ಹಿಂದೆ ವೈ ಕೆ ಆರ್  ರಾಮಯ್ಯ, ಹುಚ್ಚು ಮಾಸ್ತಿ ಗೌಡ್ರು, ಡಿ ನಾಗರಾಜಯ್ಯರವರು ಅಭಿವೃದ್ಧಿ ವಿಚಾರದಲ್ಲಿ ಪ್ರಚಾರ ಮಾಡದೆ ಅವರು ಅಭಿವದ್ಧಿ ಕೆಲಸ ಮಾಡುತ್ತಿದ್ದರು, ಆದ್ದರಿಂದ ಇಂದಿಗೂ ಕೂಡ ಅಭಿವೃದ್ಧಿ ಸಾಧನೆಗಳು ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸಗಳು ಮಾಡಿದ್ದಾರೆ. 
ಜನರು ಮೆಚ್ಚುವಂತ ಕೆಲಸ ಮಾಡಬೇಕು ಶಾಸಕರು ಫೋಟೋ ರಾಜಕಾರಣ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಿ  ಅಭಿವೃದ್ಧಿಯ ಕಡೆ ಗಮನ ಹರಿಸಿ ಎಂದು ಸಲಹೆ ನೀಡಿದರು.
 ತಾಲೂಕಿನ ದೊಡ್ಡಕೆರೆಯಲ್ಲಿ 564 ಎಂ ಟಿ ಎಫ್ ಸಿ ನೀರನ್ನು ಶೇಖರಣೆ ಮಾಡಬಹುದು ಪ್ರಸ್ತುತ ಕೆರೆಯಲ್ಲಿ 231 ಎಂ ಟಿ ಎಫ್ ಸಿ ನೀರನ್ನು ಮಾತ್ರ ಇಡಲಾಗಿದೆ. ಪಟ್ಟಣದ ನಾಗರಿಕರಿಗೆ ಕುಡಿಯಲು 70 ಎಂ ಟಿ ಎಫ್ ಸಿ ನೀರು ಸೀಮಿತವಾಗಿದೆ. ಆ ನೀರು ಜನರಿಗೆ ಯೋಗ್ಯವಲ್ಲದ ನೀರಾಗಿದೆ. ಆ ನೀರನ್ನು ಕಾಲುವೆ ಮತ್ತು ತೊರೆಗಳ ಮೂಲಕ ಆ ನೀರನ್ನು ಖಾಲಿ ಮಾಡಿ ಹೊಸ ನೀರನ್ನು ಕೆರೆಗೆ ತುಂಬಿಸಬಹುದು ಪಟ್ಟಣದ ನಾಗರಿಕರಿಗೆ ಉಪಯೋಗವಾಗುತ್ತದೆ.
ಕೆರೆ-ಕಟ್ಟೆಗಳು ಕಟ್ಟಿತ್ತು ಕುಡಿಯುವ ನೀರಿಗಾಗಿ ಎಲ್ಲ ಅಚ್ಚು ಕಟ್ಟು   ಪ್ರದೇಶಗಳಿಗೆ ನೀರು ನೀರು ಹರಿಯಬೇಕು ಅದು ರೈತರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಸುಮಾರು ವರ್ಷಗಳಿಂದ  ಕಾಲುವೆ ಮತ್ತು ತೊರೆಗಳಲ್ಲಿ ನೀರು  ಹರಿಯದೆ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.
 ಪ್ರತಿವರ್ಷ ಹೇಮಾವತಿ ನೀರಿನ ವಿಚಾರದಲ್ಲಿ ನಮ್ಮ ತಾಲೂಕಿಗೆ ಅನ್ಯಾಯವಾಗುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು  ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಅಧ್ಯಕ್ಷ ಅನಿಲ್ ತಿಳಿಸಿದರು.
 ಈ ಸಂದರ್ಭದಲ್ಲಿ ಬೋರೇಗೌಡ, ರಂಗಸ್ವಾಮಿಣ್ಣ, ರಾಜೇಶ್,  ಕೃಷ್ಣ ವೆಂಕಟೇಶ್, ಗೊಟ್ಟಿಕೆರೆ ರೇಣುಕೇಶ್, ಕುಮಾರ್ ಗೌಡ, ಚನ್ನಪ್ಪ ಸೇರಿದಂತೆ ಹಲವಾರು ರೈತ ಮುಖಂಡರು ಇದ್ದರು.