ಕುಣಿಗಲ್:- ದೊಡ್ಡ ಕೆರೆಯ ಕುಡಿಯುವ ನೀರು ಯೋಗ್ಯವಲ್ಲ ಹೊಸ ನೀರು ತುಂಬಿಸಿ ಎಂದು  ಜೆಡಿಎಸ್ ಮುಖಂಡ ಬಿಎನ್ ಜಗದೀಶ್ ಒತ್ತಾಯಿಸಿದ್ದಾರೆ.
 ಪಟ್ಟಣದ ರಮ್ಯ ಶ್ರೀ ಪಾರ್ಟಿಹಾಲಿನಲ್ಲಿ ಏರ್ಪಡಿಸಿದ್ದ  ದೊಡ್ಡಕೆರೆ ಅಚ್ಚುಕಟ್ಟುದಾರರ ಸಭೆ ಯಲ್ಲಿ  ಭಾಗವಹಿಸಿ  ಮಾತನಾಡಿದರು.
 ದೊಡ್ಡ ಕೆರೆಯ ನೀರು  ಪಟ್ಟಣದ ಸಾರ್ವಜನಿಕರಿಗೆ ಕುಡಿಯಲು ಯೋಗ್ಯವಲ್ಲದ ನೀರಾಗಿದೆ ಎಂದು ಈ ಹಿಂದೆ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದರು.
ಕೆರೆಯಲ್ಲಿರುವ ನೀರನ್ನು ಕಾಲುವೆಗಳು ಮತ್ತು ನಾಗಿನಿ ನದಿ  ಮೂಲಕ ರೈತರ ಜಮೀನಿಗೆ ಹರಿಸಿದಾಗ  ಅನುಕೂಲವಾಗುತ್ತದೆ, ಕೆರೆಯ ನೀರನ್ನು ಖಾಲಿ ಮಾಡಿ ಹೊಸ ನೀರು ತುಂಬಿಸಿ ಎಂದು ಒತ್ತಾಯಿಸಿದರು.
ಬೇಗೂರು ಕೆರೆ 570 ಎಕ್ಕರೆ  ಪ್ರದೇಶ  ಹಾಗೂ ಚಿಕ್ಕಕೆರೆ 510 ಎಕರೆ ಪ್ರದೇಶ ವಿದೆ  ಕಾಲುವೆ ಮತ್ತು ತೊರೆಗಳ ಸುತ್ತಮುತ್ತ ಹಲವಾರು ರೈತರು ವ್ಯವಸಾಯ ಮಾಡುತ್ತಿದ್ದರು, 10 ವರ್ಷಗಳಿಂದ ಈ ಭಾಗದ ರೈತರಿಗೆ ನೀರಿನ ಸೌಕರ್ಯ ಇಲ್ಲದೆ ವ್ಯವಸಾಯ ಮಾಡದಂತೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೊಳವೆ ಬಾವಿಗಳ ಮೂಲಕ ರೈತರು ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿದ್ದಾರೆ ಆದರೆ ಅಂತರ್ಜಾಲವು ಕೂಡ ಕಡಿಮೆಯಾಗುತ್ತಿದೆ ಇದರಿಂದ ನೀರು ಬಿಡುಗಡೆ ಮಾಡಿದ್ದಾರೆ ಅಂತರ್ಜಾಲವು ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
 ರಾಜಕಾರಣಿಗಳು ಸ್ವಾರ್ಥಿಗಳಾಗಿದ್ದಾರೆ ರಾಜಕೀಯವಾಗಿ ಲಾಭ ರೈತರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಮಾತನಾಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾದ  ಕೆ ಎಲ್ ಹರೀಶ್ ಮಾತನಾಡಿ ನೀರಿನ ವಿಚಾರದಲ್ಲಿ ತಾರತಮ್ಯ  ಮಾಡಬಾರದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಸುಮಾರು ವರ್ಷಗಳ ಹಿಂದೆ ತಾಲೂಕಿನಲ್ಲಿ ಕಬ್ಬು ಬೆಳೆಯುವರ ಸಂಖ್ಯೆ ಹೆಚ್ಚಾಗಿತ್ತು, ಈಗ ನೀರಿನ ಅಭಾವದಿಂದ ಕಬ್ಬನ್ನು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.