ಬೆಟ್ಟಹಳ್ಳಿ ಮಠಕ್ಕೆ ಭೇಟಿ ಕಾಮಗಾರಿ ಪರಿಶೀಲಿಸಿದ ಕೆಆರ್ ಐಡಿಎಲ್ ಸಂಸ್...
ಬೆಟ್ಟಹಳ್ಳಿ ಮಠದಲ್ಲಿ ಅಂದಾಜು ಹತ್ತು ಕೋಟಿ ರೂ ವೆಚ್ಚದಲ್ಲಿ ದೇವಾಲಯ ಪ್ರಸಾದ ನಿಲಯ ವಸತಿ ಗೃಹ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಈ ಸಂಬಂಧ ಸ್ಥಳ ಪರಿಶೀಲನೆ ಮಾಡಿದ ಕೆಆರ್ ಐಡಿಎಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ ಬೆಟ್ಟಹಳ್ಳಿ ಮಠಕ್ಕೆ ತನ್ನದೇ ಆದ ಇತಿಹಾಸವಿದೆ ಕೆಂಪೇಗೌಡರ ಕಾಲದಲ್ಲಿ ಶ್ರೀಮಠಕ್ಕೆ ಆಡಳಿತ ವರ್ಗ ಉತ್ತಮ ರೀತಿ ಸ್ಪಂದಿಸುತ್ತಿದೆ ಆದ್ದರಿಂದ ನಾವೂ ಕೂಡ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಗಡಿ ಪ್ರಾಧಿಕಾರದ ಅಧ್ಯಕ್ಷರಾದ ರಂಗಧಾಮಯ್ಯ ,ಮುಖಂಡರಾದ ಮಾಗಡಿ ವಿಜಯ್ ಸ್ಥಳೀಯ ಮುಖಂಡ ಗಂಗಶಾನಯ್ಯ ಪದ್ಮನಾಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಸಮಿತಿ ಸಂಚಾಲಕರಾದ ವಸಂತ್ ಕುಮಾರ್ ಸೇರಿದಂತೆ ಹಲವಾರು ಮಠದ ಭಕ್ತರು  ಈ ಸಂದರ್ಭದಲ್ಲಿದ್ದರು
