ಬಿಜೆಪಿ ಕಾನೂನು ಪ್ರಕೋಷ್ಠದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ

ಕುಣಿಗಲ್ ಪಟ್ಟಣದ ದೊಡ್ಡಪೇಟೆಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗೇಂದ್ರ ಹೊಡಾಘಟ್ಟ ಮಾತನಾಡಿದರು.


ನಿರ್ಗತಿಕರಿಗೆ ಧ್ವನಿ ಇಲ್ಲದವರಿಗೆ ಬಿಜೆಪಿ ಪ್ರಕೋಷ್ಠದ ವತಿಯಿಂದ ಕಾನೂನು ನೆರವು ನೀಡಿ ಸಾರ್ವಜನಿಕ ಕೆಲಸಗಳನ್ನು ಹೆಚ್ಚು ಮಾಡುವ ಮುಖಾಂತರ ಸಂಘದ ಚಟುವಟಿಕೆಯನ್ನು ಉನ್ನತ ಮಟ್ಟಕ್ಕೆ ಏರಿಸಬೇಕು ಎಂದರು.
ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಮಾತನಾಡಿ ಎಲ್ಲಾ ಘಟಕಗಳನ್ನು ಸಮಾನ ರೀತಿಯಲ್ಲಿ ಕಾಣುವುದು ಮತ್ತು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ಎಲ್ಲರ ಜವಬ್ದಾರಿಯಾಗಿದೆ ಅದಕ್ಕಾಗಿ ನಾವು ಪ್ರತಿದಿನ ಶ್ರಮಿಸುತ್ತಿದ್ದೇವೆ ಎಂದರು.




ಜಿಲ್ಲಾ ಪ್ರಮುಖರಾದ ಹಿಮಾನಂದ.ಜಿಲ್ಲಾ ಸಂಚಾಲಕರಾದ ರೇಣುಕೇಶ್. ಕೇಂದ್ರ ಸಮಿತಿ ಸದಸ್ಯರಾದ ದರ್ಶನ್ ಗೌಡ. ಮುಖಂಡರಾದ ಸತ್ಯನಾರಾಯಣ್ ಒಡೆಯರ್, ತಿಮ್ಮಪ್ಪ, ನಾರಾಯಣ್ ಗೌಡ, ಸಿದ್ದೇಗೌಡ, ಕುಣಿಗಲ್ ಉಸ್ತುವಾರಿ ರವಿಚಂದ್ರ, ಪ್ರಮುಖರಾದ ಶಂಕರ್, ಸೇರಿದಂತೆ ಹಲವಾರು ಗಣ್ಯರು ಹಾಗೂ ವಕೀಲರು ಇದ್ದರು