ಇಂದಿಯಿಂದ 12 ದಿನಗಳ ಕಾಲ ಕುಣಿಗಲ್ ಕೆರೆಗೆ ಹೇಮಾವತಿ
ಕುಣಿಗಲ್ ಇಂದಿಯಿಂದ 12 ದಿನಗಳ ಕಾಲ ಕುಣಿಗಲ್ ಕೆರೆಗೆ ಹೇಮಾವತಿ ಹರಿಯುತ್ತದೆ ಎಂದ ಪಿ ಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷರಾದ ಡಿ ಕೃಷ್ಣ ಕುಮಾರ್ ತಿಳಿಸಿದರು.
ಕುಣಿಗಲ್ ಪಟ್ಟಣದ ದೊಡ್ಡಪೇಟೆಯ ಸಿರ್ವಿ ಸಮಾಜದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ನೀವು ಕುಣಿಗಲ್ ಗೆ  ನೀರನ್ನು ತರಲು ವಿಫಲರಾಗಿದ್ದಿರಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ತಾಲೂಕಿಗೆ ನಿರೀಕ್ಷೆಗೂ ಮೀರಿದ ಹೇಮಾವತಿ ನೀರು ಹರಿದು ಬರುತ್ತಿದೆ ಎಂದರು.
 ಹೇಮಾವತಿ ನಾಲೆಯಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಮತ್ತು ಮಣ್ಣನ್ನು ತೆರವು ಮಾಡಲಾಗಿದೆ ಮತ್ತು ತಾಲೂಕಿನಲ್ಲಿ ಮಳೆ ಆಗಿರುವುದರಿಂದ ನಾಲೆಯಿಂದ ಸರಾಗವಾಗಿ ತಾಲೂಕಿನ ಕೆರೆಗಳಿಗೆ ನೀರು ಹರಿಯಲಿದೆ ನಿಮ್ಮ  ಕೆರೆಗಳು ತುಂಬಿ ಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 ಮೊದಲನೆಯ ಹಂತದಲ್ಲಿ ಹೇಮಾವತಿ ನೀರು 12 ದಿನಗಳ ಕಾಲ ಕುಣಿಗಲ್ ಕೆರೆ ಗೆ ಹರಿಸಲು ಹೇಮಾವತಿ ನಾಲೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
 ಕುಣಿಗಲ್ ಆಸ್ಪತ್ರೆಗೆ ಹೊಸದಾಗಿ ಬಂದಿರುವ ಆಕ್ಸಿಜನ್ ಇನ್ಯೂಟ್  ಯಂತ್ರವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ  ಕೋವಿಡ್ ಸಭೆಯಲ್ಲಿ ಬೇಡಿಕೆ ಇಟ್ಟಾಗ ಖಾಸಗಿ ಕಂಪನಿಯ ಸಹಕಾರದಿಂದ  ತಾಲ್ಲೂಕಿನ ಅಮೃತೂರು ಯಡಿಯೂರು ಹುಲಿಯೂರುದುರ್ಗ  ಆಸ್ಪತ್ರೆಗಳ ರೋಗಿಗಳಿಗೆ ಅನುಕೂಲವಾಗುತ್ತದೆ. ಬಿಜೆಪಿ ಸರ್ಕಾರ ಆಕ್ಸಿಜನ್ ಇನ್ಯೂಟ್ ನ್ನು ಬಿಡುಗಡೆ ಮಾಡಿದೆ.
 ನೀವು ಮಾಡಿರುವ ಕೆಲಸವನ್ನು ಜನರ ಮುಂದೆ ಇಡೀ ಯಾರೋ ಮಾಡಿರುವ ಕೆಲಸವನ್ನು ನಾನು ಮಾಡಿದೆ ಎಂದು ಹೇಳಬೇಡಿ  ತಾಲೂಕಿನ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಶಾಸಕರ ಅನುದಾನವನ್ನು ನೀವು ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು.
 ತುರುವೇಕೆರೆ ತಾಲೂಕಿನ ಶಾಸಕರ ಜೊತೆ ಮಾತನಾಡಿದ ಸಚಿವರು ನಿಮ್ಮ ತಾಲೂಕಿನ ನೀರನ್ನು ಪಡೆದುಕೊಳ್ಳಿ ಬೇರೆಯವರ  ತಾಲೂಕಿನ ನೀರನ್ನು ಕದಿಯಬೇಡ  ಎಂದು ಎಚ್ಚರಿಸಿದ್ದಾರೆ ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಬಲರಾಮ್ ಸೇರಿದಂತೆ ಹಲವಾರು ಮುಖಂಡರು ಇದ್ದರು.
