ಶಾಸಕ ಡಾ ರಂಗನಾಥ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ 
ಸಾರ್ವಜನಕರಿಂದ ಹಣಕ್ಕೆ ಬೇಡಿಕೆ
ಕುಣಿಗಲ್ ಶಾಸಕ ಡಾ ರಂಗನಾಥ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಸಾರ್ವಜನಕರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದು ಇದಕ್ಕೆ ಸ್ಪಂದಿಸದಂತೆ ಶಾಸಕರ ಕಚೇರಿ ಮೂಲಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ .
ರಂಗನಾಥ್ ದೊಡ್ಡಯ್ಯ ಎಂಬ ಹೆಸರಿನಲ್ಲಿ ಶಾಸಕರ ಭಾವಚಿತ್ರವಿರುವ ಫೇಸ್ ಬುಕ್ ಖಾತೆ ಸೃಷ್ಟಿಸಿದ್ದಾರೆ ಸತೀಶ್ ವಿಜಯ್ ಸಂತು ಸೇರಿದಂತೆ ಹಲವಾರು ವ್ಯಕ್ತಿಗಳ ಖಾತೆಯಲ್ಲಿ 1200 ರಿಂದ 15000 ಸಾವಿರದವರೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದ್ದು ನಕಲಿ ಖಾತೆಗೆ ಸ್ಪಂದಿಸದಂತೆ ಶಾಸಕರ ಕಚೇರಿಯಿಂದ ಮನವಿ ಮಾಡಿದ್ದಾರೆ.
