ದಲಿತ ಮಹಿಳೆ ಸಂಸ್ಕಾರಕ್ಕೆ ತಡೆ ತಹಸೀಲ್ದಾರ್ ಮಧ್ಯಪ್ರವೇಶ


                   

ತಾಲ್ಲೂಕಿನ ವೆಂಕಟೇಗೌಡನ ಪಾಳ್ಯದಲ್ಲಿ ದಲಿತ ಮಹಿಳೆ ಶವ ಸಂಸ್ಕಾರಕ್ಕೆ ತಡೆ ತಹಸೀಲ್ದಾರ್ ಮಧ್ಯಪ್ರವೇಶ 

ಗ್ರಾಮದ ಲಕ್ಷ್ಮಮ್ಮ ಎಂಬ ಮಹಿಳೆ ಅನಾರೋಗ್ಯ ನಿಮಿತ್ತ ಮೃತಳಾಗಿದ್ದಳು.


ಸಾರ್ವಜನಿಕರ ಸ್ಮಶಾನಕ್ಕೆ ಮತ್ತು ಕಸ ವಿಲೇವಾರಿ ಘಟಕಕ್ಕೆ ತಾಲ್ಲೂಕು ಆಡಳಿತ ಸರ್ವೇ ನಂಬರ್  70 ರಲ್ಲಿ  ಭೂಮಿಯನ್ನು ಕಾಯ್ದಿರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿತ್ತು.
ಸದರಿ ಜಾಗದಲ್ಲಿ ದಲಿತ ಮಹಿಳೆಯ ಶವಸಂಸ್ಕಾರ ಮಾಡಲು ಮುಂದಾದಾಗ ಕೆಲವರು ತಕರಾರು ತೆಗೆದಿದ್ದಾರೆ.


ವಿಚಾರ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್ ಮಹಾಬಲೇಶ್ವರ್ ಹಾಗೂ ಕಂದಾಯ ನಿರೀಕ್ಷಕರಾದ ಚಂದ್ರಯ್ಯ, ಮತ್ತು ಕಂದಾಯ ಅಧಿಕಾರಿ ಪ್ರಸನ್ನ, ಸ್ಥಳೀಯರನ್ನು ಮನವೊಲಿಸಿ ಶವಸಂಸ್ಕಾರ ಮಾಡಿಸಿದರು.