ಹೆದ್ದಾರಿಯಲ್ಲಿ ದೇಶೀಯ ಗೋವು ಸಾವು --
ಹಿಂದೂ ಯುವಕರಿಂದ ಸಂಸ್ಕಾರ
ಕುಣಿಗಲ್:- ಕಸಾಯಿಖಾನೆಗೆ ಸಾಗಿಸುವಾಗ ತಾಲ್ಲೂಕಿನ ಬೇಗೂರು ಬೈಪಾಸ್ ಬಳಿ ಹಸು ರಸ್ತೆಗೆ ಬಿದ್ದು ಮೃತಪಟ್ಟಿದ್ದು ಅನಾಥ ಶವವನ್ನು ಹಿಂದೂ ಯುವ ವಾಹಿನಿ ಪದಾಧಿಕಾರಿಗಳು ಶವ ಸಂಸ್ಕಾರ ಮಾಡಿದ್ದಾರೆ.
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದರ ಬಳಿ ಬೇಗೂರು ಬೈಪಾಸ್ ನಲ್ಲಿ ಸೋಮವಾರ ರಾತ್ರಿ ವಾಹನವೊಂದರಲ್ಲಿ ಹಸುಗಳನ್ನು ಸಾಗಿಸುವಾಗ ಆಯತಪ್ಪಿ 1ಹಸು ಕೆಳಗೆ ಬಿದ್ದಿದೆ, ಹೆದ್ದಾರಿಯಲ್ಲಿ ಹಿಂಬದಿಯಿಂದ ಬಂದ ಲಾರಿಯೊಂದು ಬಿದ್ದ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ  ಸ್ಥಳದಲ್ಲೇ ಮೃತಪಟ್ಟಿದೆ ಎಂದು ಬಲ್ಲ ಮೂಲಗಳಿಂದ ಸುದ್ದಿ ತಿಳಿದ ಹಿಂದೂ ಯುವವಾಹಿನಿ ಪದಾಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದರು.
ಅನಾಥವಾಗಿ ರಸ್ತೆಯಲ್ಲಿ ಬಿದ್ದಿದ್ದ ಪಶುವನ್ನು ಶವಸಂಸ್ಕಾರ ಮಾಡುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಯುವವಾಹಿನಿ ಅಧ್ಯಕ್ಷ ರಾಮು ಕಾರ್ಯದರ್ಶಿ ಗಿರೀಶ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜು ಹಾಗೂ ಸ್ಥಳೀಯರಾದ ರಮೇಶ್ ಮತ್ತು ಶಿವರಾಮ್ ಇದ್ದರು