ಕೆಂಪೇಗೌಡರ ಕಾಲದ ಮಠದ ಜೀರ್ಣೋದ್ಧಾರಕ್ಕೆ ತಯಾರಿ
ಕುಣಿಗಲ್:- ನಾಡಪ್ರಭು ಮಾಗಡಿ  ಕೆಂಪೇಗೌಡ ನಿರ್ಮಿಸಿದ ಬೆಟ್ಟಹಳ್ಳಿಮಠವನ್ನು ನವೀಕರಣ ಮಾಡುವ ಕೆಲಸ ಪ್ರಾರಂಭ ವಾಗಿದ್ದು ಶಿವ ರಾತ್ರಿ ವೇಳೆಗೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಬೆಟ್ಟಹಳ್ಳಿ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಬೆಟ್ಟಹಳ್ಳಿ ಮಠ ದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು 
ಮಠದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಮಾನಸಿಕ ನೆಮ್ಮದಿ ಮಠಗಳಲ್ಲಿ ಸಿಗುತ್ತದೆ ಕೋವಿಡ್ ನಂತರ ಈ ಎಲ್ಲ ಅನುಭವಗಳು ನನಗೆ ಆಗಿದೆ ಎಂದರು 
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹುಲಿಯೂರುದುರ್ಗ ಹೋಬಳಿ ಹಂಗರಹಳ್ಳಿ ಮಟ್ಟದ ಬಾಲ ಮಂಜು ನಾಥ ಸ್ವಾಮೀಜಿ  ನಾವು ಇಷ್ಟಪಟ್ಟು ಕಾವಿಧಾರಿ ಗಳಾಗಿದ್ದೇವೆ ಸಮಾಜಕ್ಕೆ ಉತ್ತಮ ಸೇವೆ ನೀಡಬೇಕೆಂಬುದು ನಮ್ಮ ಗುರಿ ಆಗಿದೆ ಆದ್ದರಿಂದ ನಾನು ಮತ್ತು ನನ್ನ ಸಮಾಜ ಮಠಗಳ ಪರವಾಗಿ ಇರುತ್ತೇವೆ ಎಂದರು 
ನೆಲಮಂಗಲದ ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡುತ್ತಾ ನಾವು ಮನಸೋಯಿಚ್ಛೆ ಬೇಕಾಬಿಟ್ಟಿ ಖರ್ಚು ಮಾಡುವ ಅಲ್ಪ ಹಣವನ್ನು ಉಳಿಸಿ ಮಠಕ್ಕೆ ದಾನ ಮಾಡಿ ಇದರಿಂದ ಸಾರ್ಥಕವಾದ ಸೇವೆ ನಿಮಗೆ ಸಿಗುತ್ತದೆ ಎಂದರು 
ಈ ಸಂದರ್ಭದಲ್ಲಿ  ವಿದ್ವಾನ್ ಓಎಸ್ ಕುಮಾರಸ್ವಾಮಿ ತಂದೆಯ ನೆನಪಿಗೋಸ್ಕರ ಶಾಲೆ ನಿರ್ಮಿಸಿ ಮಠಕ್ಕೆ ದಾನವಾಗಿ ನೀಡಿದರು.
ಬಿಜೆಪಿ ಮುಖಂಡ ರಾಜೇಶ್ ಗೌಡ, ಕಾಂಗ್ರೆಸ್ ಮುಖಂಡರಾದ ಆಡಿಟರ್ ನಾಗರಾಜ್, ಕೆಂಪೀರೇಗೌಡ,ತಾಲ್ಲೂಕು ಪಂಚಾಯಿತಿ ಸದಸ್ಯ  ವಿಶ್ವನಾಥ, ರಾಜಣ್ಣ. ವೀರಶೈವ ಲಿಂಗಾಯಿತ ಮುಖಂಡ ರಾದ ಮಹದೇವಯ್ಯ ಸೇರಿದಂತೆ ಹಲವಾರು ಮಠದ ಅಭಿಮಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು