ಮಾರ್ಕೋನಹಳ್ಳಿ ಯಿಂದ ಆಗಸ್ಟ್ 27 ಕ್ಕೆ ರಾಗಿ ಬೆಳೆಗೆ ನೀರು


ಮಂಗಳವಾರ ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಮತ್ತು ಶಾಸಕರ ಜೊತೆ ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.


ಮಾರ್ಕೋನಹಳ್ಳಿ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆ ಮತ್ತು ರಾಗಿ ಬೆಳೆಗೆ ಅನುಗುಣ ಆಗುವುದರಿಂದ ರಾಗಿ ಬೆಳೆಯುವ ರೈತರಿಗೆ ನೀರು ನೀಡಬೇಕೆಂದು ತೀರ್ಮಾನಿಸಲಾಗಿದೆ.




ಈ ಸಂದರ್ಭದಲ್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ನೀರನ್ನು ಸರಿಯಾದ ರೀತಿ ಬಳಕೆ ಮಾಡಿ,ಸುಮ್ಮನೆ ಪೋಲು ಮಾಡುವುದು ಬೇಡ ನಾನು ಕೂಡ ಸರ್ಕಾರದ ಜೊತೆ ಹೋರಾಟ ಮಾಡಿ ಕೆರೆಗೆ ನೀರು ತರುವ ಪ್ರಯತ್ನ ಮಾಡುತ್ತೇನೆ ಎಂದರು.


ಉಪ ವಿಭಾಗಾಧಿಕಾರಿ ಅಜಯ್ ಮಾತನಾಡಿ ನೀರಿನ ಲಭ್ಯತೆಗೆ ತಕ್ಕಂತೆ ರೈತರು ಬೆಳೆ ಬೆಳೆದಾಗ ನೀರು ಮತ್ತು ಬೆಳೆಗೆ ಹೊಂದಾಣಿಕೆಯಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಕೃಷಿ ತೋಟಗಾರಿಕೆ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು