ಕೊರೋನಾ ನಿರ್ಮೂಲನಕ್ಕಾಗಿ ಸ್ವಂತ ಭೂಮಿಯನ್ನು ನೀಡಲು ಮುಂದಾದ ಉದ್ಯಮಿ ಯಾರು ಗೊತ್ತಾ?
ಕೊರೋನಾ ನಿರ್ಮೂಲನಕ್ಕಾಗಿ  ತನ್ನ ಸ್ವಂತ ಭೂಮಿಯನ್ನು ನೀಡಲು ಮುಂದಾದ ಉದ್ಯಮಿ ಯಾರು ಗೊತ್ತಾ?
ಕೊರೋನಾ ಮಹಾಮಾರಿ ಎಲ್ಲರನ್ನೂ ಬಲಿಪಡೆಯುತ್ತಿದೆ ಇಂತಹ ವಿಪತ್ತಿನ ಸಂದರ್ಭದಲ್ಲಿ  ಆಸ್ತಿ ಯಾರಿಗೆ ಬೇಕು ಎಂಬುದು ದೊಡ್ಡ ಪ್ರಶ್ನೆ ?
ಆದರೂ ಕೂಡ ಕೆಲವರು ಹಣ ಮಾಡಲು ವೈದ್ಯಕೀಯ ಎಂಬ ಮಹಾ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡಿ ಶವಗಳ ಮೇಲೆ ದುಡ್ಡು ಮಾಡುತ್ತಿದ್ದಾರೆ.
ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಹಳ್ಳಿಗಾಡಿನಿಂದ ಬಡತನದಲ್ಲಿ ಬೆಳೆದು ದೊಡ್ಡ ಉದ್ದಿಮೆಯಾಗಿ 8ಸಾವಿರ ಕುಟುಂಬಗಳ ನಿರ್ವಹಣೆ ಮಾಡುತ್ತಿರುವ ಒಬ್ಬ ವ್ಯಕ್ತಿ ತನ್ನ ಸ್ವಂತ ಭೂಮಿಯನ್ನು ಆಸ್ಪತ್ರೆ ನಿರ್ಮಾಣ ಮಾಡುವ ಸಲುವಾಗಿ ನೀಡಲು ಮುಂದಾಗಿದ್ದಾರೆ 
ಇವರ ಬಗ್ಗೆ ನಾವು ಇನ್ನೂ ಹೆಚ್ಚು ವಿಚಾರಗಳನ್ನು ತಿಳಿಸುತ್ತಿದ್ದೇವೆ 
ರಾಮನಗರ ಜಿಲ್ಲೆಯ ಕೇತೋಹಳ್ಳಿ ಗ್ರಾಮದ ಎಲ್ ವಿ ಪರಮಶಿವಯ್ಯ ಈತನೇ ಮಹಾದಾನಿ.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದು ಬೆಂಗಳೂರಿನ ಹಲವಾರು ಮಾರುಕಟ್ಟೆಗಳಲ್ಲಿ ಹಗಲಿರುಳು ಶ್ರಮಿಸಿ ಕೂಲಿ ಕೆಲಸ ಮಾಡಿ ಫುಟ್ಬಾತ್ ಅಂಗಡಿಗಳಲ್ಲಿ ತಿಂಡಿ ತಿಂದು ಬದುಕು ಕಟ್ಟಿಕೊಂಡ ಎಲ್ ವಿ ಪರಮಶಿವಯ್ಯ ರವರು ಆರೋಗ್ಯ ಕ್ಷೇತ್ರಕ್ಕೆ ಭೂಮಿ ನೀಡಲು ಮುಂದಾಗಿದ್ದಾರೆ.
ಎಲ್ ವಿ ಟ್ರಾವೆಲ್ಸ್ ಎಂಬ ಉತ್ತಮವಾದ ಸಂಸ್ಥೆಯನ್ನು ಪ್ರಾರಂಭಿಸಿ ಸುಮಾರು 8ಸಾವಿರ ಕುಟುಂಬಗಳ ನಿರ್ವಹಣೆ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಒತ್ತು ಅವರಿಗಾಗಿ ಸುಮಾರು ಕೋಟಿ ಕೋಟಿ ಬೆಲೆಬಾಳುವ ಹಲವಾರು ನಿವೇಶನಗಳನ್ನು ಮಾರಾಟ ಮಾಡಿ ಸಂಬಳ ನೀಡಿದ್ದಾರೆ 
ಪ್ರತಿದಿನ ಇವರು ತನ್ನ ನೌಕರರನ್ನು ನೌಕರರಾಗಿ ನೋಡುತ್ತಿಲ್ಲ ಸಹೋದ್ಯೋಗಿಗಳ ರೀತಿ ನೋಡುತ್ತಾ ಅಣ್ಣ ತಮ್ಮನ ರೀತಿ ಕಾರ್ಯನಿರ್ವಹಿಸುತ್ತಾ ಹಗಲಿರುಳು ಶ್ರಮಿಸುತ್ತಿದ್ದಾರೆ 
ಪ್ರತಿದಿನ ತನ್ನ ನೌಕರರಿಗೆ ಹಾಗೂ ಅವರ ಸಂಬಂಧಿಕರಿಗೆ ಆಸ್ಪತ್ರೆ ಖರ್ಚು ಆಕ್ಸಿಜನ್ ಊಟ ವಸತಿ ಒದಗಿಸುವ ಜವಾಬ್ದಾರಿ ಹೊಂದಿರುವ ಎಲ್ ವಿ ಪರಮಶಿವಯ್ಯ ತಮ್ಮ ಸ್ವಂತ ಭೂಮಿಯನ್ನು ಆಸ್ಪತ್ರೆಗೆ ನೀಡಲು ಮುಂದಾಗಿದ್ದಾರೆ 
ಆಸಕ್ತಿಯುಳ್ಳ ವೈದ್ಯರುಗಳು ದಯವಿಟ್ಟು ಇವರನ್ನು ಸಂಪರ್ಕಿಸಿ ಆಸ್ಪತ್ರೆ ಪುನರಾರಂಭಿಸಬೇಕೆಂದು ಕರ್ನಾಟಕ ರಾಜ್ಯದ ಎಲ್ಲರ ಪರವಾಗಿ ಮನವಿ ಮಾಡುತ್ತೇವೆ