ಕುಣಿಗಲ್ ಗೆ 30 ಆಕ್ಸಿಜನ್ ಹೆಚ್ಚುವರಿ ನೀಡಿದ ಸರ್ಕಾರ

ಕುಣಿಗಲ್ 6;- 
ಪಟ್ಟಣದಲ್ಲಿ ಆಕ್ಸಿಜನ್ ಗಾಗಿ ಹೈಡ್ರಾಮಾ ನಡೆಯಿತು ಆದರೂ ಕುಣಿಗಲ್ ಜನತೆಗೆ ಆಕ್ಸಿಜನ್ ಸಿಕ್ಕಂತಾಗಿದೆ.

ಶಾಸಕಡಾಕ್ಟರ್ ರಂಗನಾಥ್ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಪ್ರಾಣವಾಯುವಿಗಾಗಿ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ಶಾಸಕರ ಪ್ರತಿಭಟನೆಗೆ ಬೆಂಗಳೂರು ಗ್ರಾಮಾಂತರದ  ಸಂಸದ ಡಿ ಕೆ ಸುರೇಶ್ ಬಂದು ಸಾಥ್ ನೀಡಿದರು.
ಪಟ್ಟಣಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಮಾಧುಸ್ವಾಮಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಧಿಕಾರಿಗಳು ಹಾಗೂ ಸಂಸದ ಮತ್ತು ಶಾಸಕರ ಸಭೆ ಕರೆದರು.

ಈ ಸಮಯದಲ್ಲಿ ಸಂಸದ ಹಾಗೂ ಶಾಸಕರು ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡ ಸನ್ನಿವೇಶ ನಡೆಯಿತು.
ನಂತರ ಅವರ ಮನವಿಗಳನ್ನು ಸ್ವೀಕರಿಸಿದ ಉಸ್ತುವಾರಿಸಚಿವ ಮಾಧುಸ್ವಾಮಿ ಕುಣಿಗಲ್ ತಾಲ್ಲೂಕಿಗೆ ಬೇಕಾದ ನೆರವು ನೀಡಲು  ಮುಂದಾದರು. 
ಕುಣಿಗಲ್ ತಾಲ್ಲೂಕಿಗೆ ಅಮೃತ್ತೂರು ಆಸ್ಪತ್ರೆಯನ್ನು ಆಕ್ಸಿಜನ್ ಆಸ್ಪತ್ರೆಯಾಗಿ ಪರಿವರ್ತಿಸಲು ಒಪ್ಪಿಗೆ ಸೂಚಿಸಿದರು.

ಪ್ರತಿಭಟನೆ ಬೇಡ:-

ಸರ್ಕಾರ ಕೊರೋನಾ ನಿಯಂತ್ರಣ ಮಾಡಲು ತಯಾರಿದೆ ನಿಮಗೆ ಬೇಕಾದಷ್ಟು ಆಕ್ಸಿಜನ್ ಸೇರಿದಂತೆ ಔಷಧಿ ವ್ಯವಸ್ಥೆಗಳನ್ನು ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿ ಹೋಬಳಿ ಕೇಂದ್ರದಲ್ಲೂ ಕ್ವಾರಂಟೈನ್ ಸೆಂಟರ್ ಪ್ರಾರಂಭಿಸಿ ಮನೆಯಲ್ಲಿ ಓಂ ಕ್ವಾರಂಟೈನ್ ನಿಯಂತ್ರಣ ಮಾಡಿ ಹೆಚ್ಚು ವೈದ್ಯರು ಬೇಕಾದರೆ ದಯವಿಟ್ಟು ಅದಕ್ಕೆ ಜಿಲ್ಲಾಸ್ಪತ್ರೆಯನ್ನು ಸಂಪರ್ಕ ಮಾಡಿ ಎಂದು ಸಲಹೆ ನೀಡಿದರು 
ಈ ಎಲ್ಲಾ ಘಟನೆಗಳ ನಡುವೆ ಕುಣಿಗಲ್ ತಾಲ್ಲೂಕಿಗೆ ಹೆಚ್ಚು ಆಕ್ಸಿಜನ್ ಬೆಡ್ ಗಳು ಲಭಿಸಿದಂತಾಗಿದೆ