ಕೊರೋನಾ ದಿಂದ ಮಣ್ಣಾದ ನಿರ್ಮಾಪಕ  ರಾಮು


ಕುಣಿಗಲ್:- ಚಿತ್ರ ನಿರ್ಮಾಪಕ ಕೊಡಗೀ ಹಳ್ಳಿ ರಾಮು ಅವರ ಅಂತ್ಯಸಂಸ್ಕಾರ ಕುಣಿಗಲ್ ತಾಲ್ಲೂಕಿನ ಕೊಡಿಗೀಹಳ್ಳಿ ಗ್ರಾಮದ ಮಲ್ಲಾಪುರದ ರಸ್ತೆಯ ತೋಟದಲ್ಲಿ ಸಂಬಂಧಿಕರ ನೇತೃತ್ವದಲ್ಲಿ ಇಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ  ನಡೆಯಿತು.
ಅಗ್ನಿಸ್ಪರ್ಶ:-
ಪಿ ಪಿ ಜಿ ಕಿಟ್ ಧರಿಸಿದ ಕುಣಿಗಲ್ ರಾಮು ಅವರ ಮಗ ಆರ್ಯನ್ ತಂದೆಯ ಶವಕ್ಕೆ ಸಂಸ್ಕಾರ ಪೂಜೆ ನೆರವೇರಿಸಿದನು ಒಕ್ಕಲಿಗ ಪದ್ದತಿಯಂತೆ ಶವಕ್ಕೆ ಪೂಜೆ ಸಲ್ಲಿಸಿದ ನಂತರ ಅಗ್ನಿಸ್ಪರ್ಶ ಮಾಡಲಾಯಿತು 
ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತಿಯಾಗಿದ್ದ ಕೊಡಿಗೇಹಳ್ಳಿ ರಾಮು ಚಿತ್ರರಂಗದಲ್ಲಿ ವಿಭಿನ್ನವಾದ ಸಾಧನೆ ಮಾಡುವ ಮುಖಾಂತರ ಕುಣಿಗಲ್ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದರು 
ಕಳೆದ 1ವಾರದ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದರು.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ  ಕೊಡಿಗೇಹಳ್ಳಿ ಗ್ರಾಮದ     ಅಕ್ಕಿಪುಟ್ಟಯ್ಯ (ತಿಮ್ಮಯ್ಯ) ಮತ್ತು  ತಿಮ್ಮಮ್ಮ  ದಂಪತಿಗಳ ಪುತ್ರನಾಗಿ ಜನಿಸಿದ ರಾಮು ಪತ್ನಿ ಮಾಲಾಶ್ರೀ ಹಾಗೂ ಮಗ ಆರ್ಯನ್ ಹಾಗೂ ಮಗಳಾದ ಅನನ್ಯ ಳ ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು
ಮೃತರ ಶವವನ್ನು ಆಂಬ್ಯುಲೆನ್ಸ್ ಮುಖಾಂತರ ಕೊಡಿಗೇಹಳ್ಳಿ ಗ್ರಾಮಕ್ಕೆ ಮಂಗಳವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ತರಲಾಗಿತ್ತು 

ಒಕ್ಕಲಿಗ ಸಮುದಾಯದ ವಿಧಿ ವಿಧಾನಗಳಂತೆ, ಪತ್ನಿ ಮಾಲಾಶ್ರೀ ಮಗಳು ಅನನ್ಯಾ ಮತ್ತು ಮಗ ಆರ್ಯನ್  ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಣ್ಣ ತಮ್ಮಂದಿರು,  ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಸೇರಿದಂತೆ ಇತರರು     ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು 

ಪೊಲೀಸ್ ಬಂದೋಬಸ್ತ್ :-
 ಕೊರೋನ  ಪೀಡಿತರಾಗಿ ಮೃತರಾದ ಚಲನಚಿತ್ರ ನಿರ್ಮಾಪಕ ಕೊಡ ಗೀಹಳ್ಳಿ ರಾಮು ಅವರ ಅಂತ್ಯಸಂಸ್ಕಾರವನ್ನು ಪೋಲಿಸ್ ಬಂದೋಬಸ್ತ್ ನಲ್ಲಿ ನಡೆಸಲಾಯಿತು 
ಸಂಸ್ಕಾರ ದಲ್ಲಿ ಭಾಗವಹಿಸಿದ್ದ ಸಂಬಂಧಿಗಳು ಪಿಪಿಇ ಕಿಟ್ ಹಾಕಿಕೊಂಡು ಸಂಸ್ಕಾರ ನೆರವೇರಿಸಿದರು