ಏಸಿ ಕಚೇರಿ ಬಿಟ್ಟು ಕೋವಿಡ್ ಗಾಗಿ  ಕಸದ ಗಾಡಿ ಓಡಿಸಿದ  ಅಧ್ಯಕ್ಷ

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಕೋವಿಡ್   ಜಾಗೃತಿ ಮೂಡಿಸುವ ಸಲುವಾಗಿ ಇಲ್ಲಿನ ಪುರಸಭಾ ಅಧ್ಯಕ್ಷ ನಾಗೇಂದ್ರ ಹಾಗೂ ಮುಖ್ಯ ಅಧಿಕಾರಿ ರವಿಕುಮಾರ್ ಕಸದ ಗಾಡಿಗಳನ್ನು ಓಡಿಸುವ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಘಟನೆಯಿಂದ ಸಾರ್ವಜನಿಕರು ಶಹಬ್ಬಾಸ್ ಗಿರಿ  ನೀಡಿದ್ದು ಬಿಟ್ಟರೆ ಮಾಸ್ಕ್ ಧರಿಸುವ ಮನಸ್ಸು ಮಾಡದಿರುವುದು ವಿಪರ್ಯಾಸ

 ಬೀದಿ ಬಸವನ ಶವವನ್ನು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಿದ ಸ್ಥಳೀಯರು

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಆರು ವರುಷಗಳಿಂದ ಬೀದಿಬೀದಿ ಸುತ್ತಾಡಿ ಅಂಗಡಿ ದಿನಸಿ ಅಂಗಡಿ  ಹೋಟೆಲ್ ತಿಂಡಿ ಸೇರಿದಂತೆ ಮನಬಂದಂತೆ ಮೇವು ತಿಂದು ಸ್ವಚ್ಚಂದವಾಗಿ ಬದುಕು ಸಾಗಿಸುತ್ತಿದ್ದ ಕರಿ ಋಷಭ ಕಳೆದ ಕೆಲವು ದಿನಗಳಿಂದ ಪ್ಲಾಸ್ಟಿಕ್ ತಿನ್ನುವುದನ್ನು ಅಭ್ಯಾಸ ಮಾಡಿದ ಹಿನ್ನೆಲೆ  ಅನಾರೋಗ್ಯದಿಂದ ಮೃತಪಟ್ಟಿತ್ತು ಸತ್ತ ಕರಿವೃಷಭ ಶವವನ್ನು ಸ್ಥಳೀಯರು ಪೂಜೆ ಸಲ್ಲಿಸಿ ನಂತರ ಸ್ಮಶಾನದಲ್ಲಿ ಗುಂಡಿ ತೆಗೆದು ವಿಧಿವತ್ತಾಗಿ ಶವಸಂಸ್ಕಾರ ಮಾಡಿದರು



ಸಂಸ್ಕೃತದಲ್ಲಿ ಪಿಎಚ್ಡಿ ಡಾಕ್ಟರೇಟ್ ಪದವಿ ಪಡೆದ ತ್ರಿಪುರಾಂತಕೇಶ್ವರ ಶ್ರೀ

ಹಿತ್ತಲ ಹಳ್ಳಿ ಶ್ರೀ ತ್ರಿಪುರಾಂತಕೇಶ್ವರ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ಸಂಸ್ಕೃತ ವಿಷಯದಲ್ಲಿ ಮಾಡಿದ ಸಾಧನೆಗೆ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಗೌಡ ಮತ್ತು ಕುಲಪತಿ ದೇವನಂದ ಪಿಎಚ್ಡಿ ನೀಡಿ ಗೌರವಿಸಿದ್ದಾರೆ