ಚಿರತೆಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ
ಕುಣಿಗಲ್ ವಲಯದ ಹುಲಿಯೂರುದುರ್ಗ ಮದ್ದೂರು ಕೆಶಿಪ್ ರಸ್ತೆ SH-33 ರಲ್ಲಿ ಲಕ್ಕ ಶೆಟ್ಟಿ ಪುರ ಗ್ರಾಮ ಸರ್ವೇ ನಂಬರ್ 234 ರ ಹತ್ತಿರ ಇಂದು ಮುಂಜಾನೆ ಅಪರಿಚಿತ ವಾಹನದ ಅಪಘಾತದಿಂದ ಅಂದಾಜು 6 ವರ್ಷ ಪ್ರಾಯದ ಗಂಡು ಚಿರತೆಯು  ಮೃತ ಪಟ್ಟಿರುತ್ತದೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ 
ಹುಟ್ಟುಹಬ್ಬದ ಪ್ರಯುಕ್ತ ಉಚಿತ ಚಿಕಿತ್ಸೆ ನೀಡಿದ ಯುವಕ 
ಎಡೆಯೂರಿನ ಅಜಯ್ ತನ್ನ ಹುಟ್ಟುಹಬ್ಬದ ಪ್ರಯುಕ್ತ ಸ್ಥಳೀಯವಾಗಿ ವಾಸಿಸುವ ಬಡ ಕೂಲಿ ಕಾರ್ಮಿಕರು ವೃದ್ಧರು ಸೇರಿದಂತೆ ಇತರರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡಿದ್ದಾನೆ 
ಅವರಿಗೆ ಬೇಕಾದ ಔಷಧಿ ಮಾತ್ರೆಗಳನ್ನು ಸಹ ನೀಡಿ ಮಾನವೀಯತೆ ಮೆರೆದಿದ್ದಾನೆ 
 ಮಗನ ಈ ಕಾರ್ಯಕ್ಕೆ ತಂದೆ ರವಿಕುಮಾರ್ ತಾಯಿ ರಾಧಾ ಹಾಗೂ ತಮ್ಮ ಅಭಿ ಸೇರಿದಂತೆ ಸ್ಥಳೀಯರು ಸಾಥ್ ನೀಡಿದ್ದಾರೆ 
ಅತಿಯಾದ ಮದ್ಯಸೇವನೆ ವ್ಯಕ್ತಿ ಸಾವು 
ಕುಣಿಗಲ್ ತಾಲ್ಲೂಕಿನ ಯಲಗಲವಾಡಿ ಗ್ರಾಮದ ವೆಂಕಟೇಶ್ ಮೃತಪಟ್ಟ ವ್ಯಕ್ತಿ  ತನ್ನ ಜೀವನ ನಿರ್ವಹಣೆಗಾಗಿ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಖಾಸಗಿ ಕೆಲಸ ಮಾಡುತ್ತಾ ಬದುಕುತ್ತಿದ್ದ  ಹಬ್ಬದ ಪ್ರಯುಕ್ತ ಸ್ವಗ್ರಾಮ ಯಲಗಲವಾಡಿ ಗೆ ಬಂದಿದ್ದು ಅತಿಯಾದ  ಮದ್ಯ ಸೇವನೆ ಮಾಡಿ ಪ್ರಜ್ಞೆತಪ್ಪಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಸೇರಿಸದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ