ಬರುತ್ತಿದ್ದ 1.60 ಲಕ್ಷ ಸಂಬಳ ಬಿಟ್ಟು ರೈತರಿಗಾಗಿ ದೆಹಲಿಗೆ ಹೊರಟ ಟೆಕ್ಕಿ

ರಾಜ್ಯದ ಬಾಗಲಕೋಟೆ ಮೂಲದ ತಂದೆ ಶಿವಪುತ್ರಯ್ಯ ತಾಯಿ ಶಾಂತಾ ಅವರ ಮೊದಲನೆಯ ಮಗ ನಾಗರಾಜ್ ಕಲ್ಲುಕುಡ್ಕರ್ ಎಂಬುವನೇ ಈತ !
ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂಬುದು ಈತನ ವಾದ,
ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ಸೇರಿದಂತೆ ಹಲವಾರು ಘಟನೆಗಳು ಈತನ ಮೇಲೆ ಪ್ರಭಾವ ಬೀರಿವೆ,
ನಂತರ ಸಮಾಜದಲ್ಲಿ ಬದಲಾವಣೆ ತರಬೇಕು ಜನರನ್ನು ಜಾಗೃತಿ ಮೂಡಿಸಬೇಕೆಂದು ತನ್ನ ಕೆಲಸವನ್ನೇ ಬಿಟ್ಟು ಊರು ಊರು ಸುತ್ತಿ ಪಾದಯಾತ್ರೆ ನಡೆಸುತ್ತಿದ್ದಾನೆ ಈ ಟೆಕ್ಕಿ.
ಪ್ರತಿ ಹಳ್ಳಿ ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸಂಚಾರ ಮಾಡಿ ಸ್ಥಳೀಯವಾಗಿ ಸಿಗುವ ರೈತರಿಂದ ಸ್ಥಳೀಯವಾದ ಸಮಸ್ಯೆಗಳನ್ನು ಕೇಳುತ್ತಾ, ಬೆಂಬಲ ಬೆಲೆ ವಿಚಾರವಾಗಿ ಚರ್ಚಿಸುತ್ತಾ, ಮುಂದೆ ಸಾಗುತ್ತಿದ್ದಾನೆ.
ಈಗಾಗಲೇ 1280 ಕಿಲೋ ಮೀಟರ್   ದೂರ  ಪಾದಯಾತ್ರೆ ಮೂಲಕ ಕ್ರಮಿಸಿರುವ ಈತ ಇನ್ನೂ 6 ಸಾವಿರ ಕಿಲೋಮೀಟರ್ ಉದ್ದದ ದೆಹಲಿಗೆ ಹೋಗುವ ಗುರಿ ಹೊಂದಿದ್ದಾನೆ.



ಚಾಮರಾಜನಗರ, ಮೈಸೂರು, ಬೆಂಗಳೂರು,  ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಹಾಗೂ ಹಾಸನ  ಮುಖಾಂತರ ಪಾದಯಾತ್ರೆ ನಡೆಸಿದ್ದು, ಬಿಜಾಪುರ ಜಿಲ್ಲೆಯ ಮುಖಾಂತರ ಮಹಾರಾಷ್ಟ್ರ ಸೊಲ್ಲಾಪುರ ಕಡೆಯಿಂದ ದೆಹಲಿ ಪ್ರವೇಶ ಮಾಡುವ ಉದ್ದೇಶ ಹೊಂದಿದ್ದಾರೆ.
ಕೆಲವೆಡೆ ತೀವ್ರ ವಿರೋಧ ಕೆಲವಡೆ ಬೆಂಬಲ ಹೀಗೆ ವಿಭಿನ್ನ ಪ್ರತಿಕ್ರಿಯೆಗಳು ರೈತರಲ್ಲಿ ಸಾರ್ವಜನಿಕವಾಗಿ ಸಿಗುತ್ತಿದ್ದು ಗುರಿಮುಟ್ಟುವ ತನಕ ನಿಲ್ಲುವುದಿಲ್ಲ ಎಂಬುದು ನಾಗರಾಜ ಮಾತು.
ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂಬುದು ಕೇವಲ ನಾಗರಾಜ್ ಒತ್ತಾಯ ಆಗಬಾರದು ಪ್ರತಿಯೊಬ್ಬ ರಾಜಕೀಯ ಮುಖಂಡರು ಜನಪ್ರತಿನಿಧಿಗಳ ಒತ್ತಾಯ ವಾಗಬೇಕು.
ರೈತ ಬೆಳೆಯುವ ಬೆಳೆಗೆ ಆತನೇ ಬೆಲೆ ನಿಗದಿ ಮಾಡಬೇಕು ಅದಕ್ಕೆ ಸರ್ಕಾರ ಇಂತಿಷ್ಟು ಬೆಂಬಲ ಬೆಲೆಯನ್ನು ಯೋಚಿಸುವುದು ಒಳಿತು.
ಪ್ರತಿ ರೈತರಲ್ಲೂ ಕೂಡ ಇಂತಹ ಜಾಗೃತಿ ಗಳು ಹೆಚ್ಚಾದರೆ ರಾಜಕಾರಣ ವ್ಯವಸ್ಥೆ ಕಷ್ಟವಾಗುತ್ತದೆ ಅದಕ್ಕಿಂತ ಮೊದಲು ಜನಪ್ರತಿನಿಧಿಗಳು ಜಾಗೃತರಾಗಿ ಬೆಂಬಲ ಬೆಲೆ ಘೋಷಣೆ ಮಾಡುವುದು ಸೂಕ್ತ.