ನಟ ಚೇತನ್ ಚಿತ್ರ ಬೆಂಬಲಿಸಿದ ದಲಿತ ಮುಖಂಡರು 
ಗಾಂಜಾ ಮಾರಾಟಗಾರನ ಬಂಧನ
ಕುಣಿಗಲ್ ತಾಲ್ಲೂಕಿನ ಗವಿಮಠದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುಣಿಗಲ್  ಸಿಪಿಐ ರಾಜು ತಂಡ ಬಂಧಿಸಿದೆ 
ಈ ಸಂಬಂಧ ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ 
ಹೊಳಲುಗುಂದ ಉಮಾಮಹೇಶ್ವರಿ ಜಾತ್ರೆ
ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಹೊಳಲಗುಂದ ಗ್ರಾಮದ ಉಮಾಮಹೇಶ್ವರಿ ದೇವಿಗೆ ಇಂದು ರಥೋತ್ಸವ ಜರುಗಿತು 
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು 
ಭಕ್ತರುಗಳು ದೂರದ ಊರಿಂದ ಬಂದಂತಹ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ಕೋಸಂಬರಿ ಸೇರಿದಂತೆ ಅರವಂಟಿಗೆ ವ್ಯವಸ್ಥೆಯನ್ನು ಮಾಡಿದ್ದರು 
ತಪೋಕ್ಷೇತ್ರದ ಕಲ್ಯಾಣಿಗೆ ಕಾಯಕಲ್ಪ
ಶ್ರೀ ಸಿದ್ದಲಿಂಗೇಶ್ವರ ತಪೋಕ್ಷೇತ್ರ ಕಗ್ಗೆರೆಯಲ್ಲಿ ಕಲ್ಯಾಣಿ ಸ್ವಚ್ಛಗೊಳಿಸಿದ ಗ್ರಾಮಸ್ಥರು 
ಹಲವಾರು ವರುಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ತಪೋ ಕ್ಷೇತ್ರದ ಕಲ್ಯಾಣಿಯನ್ನು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸ್ವಚ್ಛಗೊಳಿಸಿದ್ದಾರೆ 
ತಪೋಕ್ಷೇತ್ರ ಕಗ್ಗೆರೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರರು ತಪಸ್ಸು ಮಾಡಿದಾಗ ಈ ಸ್ಥಳದಲ್ಲಿ ಪ್ರಸಾದವನ್ನು ಹೂತಿಟ್ಟಿದ್ದರು ಎಂಬ ನಂಬಿಕೆಯಿದೆ 
ಗ್ರಾಮಸ್ಥರು ಸ್ವಚ್ಛ ಮಾಡಿದ್ದು ಸರ್ಕಾರ ಸೂಕ್ತ ಅನುದಾನ ನೀಡಿ ಅದನ್ನು ಉನ್ನತೀಕರಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ