ಗ್ರಾಮ ಪಂಚಾಯಿತಿ ನೀರಿನ ಸಮಸ್ಯೆ ಹಿನ್ನೆಲೆ ವಾಟರ್ ಮೆನ್ ಎತ್ತಂಗಡಿ

ದೊಡ್ಡ ದೊಡ್ಡ ಅಧಿಕಾರಿಗಳನ್ನು ವರ್ಗಾವಣೆ ಎತ್ತಂಗಡಿ ಮಾಡುವುದು ಸಾಮಾನ್ಯವಾಗಿದೆ ಆದರೆ ವಾಟರ್ ಮ್ಯಾನ್ ಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವರ್ಗಾವಣೆ ಮಾಡುವುದು ವಿಶೇಷ ಪ್ರಕರಣವೇ ಸರಿ 

ನೀರಿನ ಸಮಸ್ಯೆ ಉಂಟಾಗುತ್ತಿದ್ದು ಈ ಗ್ರಾಮ ಪಂಚಾಯಿತಿಯಲ್ಲಿ  ಸಮಸ್ಯೆಯನ್ನು ಗುರುತಿಸಿದ ಅಧ್ಯಕ್ಷ ವೆಂಕಟೇಶ್ ಇಲ್ಲಿನ ವಾಟರ್ ಮೆನ್ ನೀರ್ಗಂತಟಿಗಳನ್ನು ವರ್ಗಾವಣೆ ಮಾಡಿದ್ದಾರೆ 

ಇದರಿಂದ ಸ್ಥಳೀಯ ರಾಜಕಾರಣ ಸೇರಿದಂತೆ ಹಲವು ಹಳೆ ದ್ವೇಷ ಮತ್ತು ಅಸೂಯೆ ಗಳಿಗೆ ಬ್ರೇಕ್ ಹಾಕಬಹುದು ಎಂಬುದು ಈ ಗ್ರಾಮ ಪಂಚಾಯಿತಿಯ ನಿರ್ಧಾರ 
ಈ ಕೆಲಸ ಮಾಡಿದವರು ಕುಣಿಗಲ್ ತಾಲ್ಲೂಕಿನ ಕೆ ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್