ಸಚಿವ ಆರ್ ಅಶೋಕ್ ವಿರುದ್ಧ ಆರೋಪಿಸಿದ ಸಿಡಿ ಲೇಡಿ ಪರ ವಕೀಲ 

ನನ್ನ ಮೇಲೆ ಪೊಲೀಸರು ಸೇರಿದಂತೆ ಬಿಜೆಪಿ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಿಡಿ ಲೇಡಿ ಪರವಕಿಲ  ಜಗದೀಶ್ ಕುಮಾರ್ ಫೇಸ್ಬುಕ್ನಲ್ಲಿ ಆರೋಪಿಸಿದ್ದಾರೆ
 2001ರಲ್ಲಿ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದೆ 2010ರಲ್ಲಿ ಕೊಡಗಿ ಹಳ್ಳಿಯಲ್ಲಿ ಸಚಿವ ಅಶೋಕ್ ರವರ ಸಂಬಂಧಿಗಳು ಅಕ್ರಮವಾಗಿ ಭೂಮಿ ಲಪಟಾಯಿಸುವ ಪ್ರಯತ್ನವನ್ನು ತಡೆಯಲು ನಾನು ಪ್ರಯತ್ನಿಸಿದ್ದಕ್ಕೆ ನನ್ನ ಮೇಲೆ 11 ಪ್ರಕರಣಗಳನ್ನು ದಾಖಲಿಸಿದರು ಎಂದು ಆರೋಪಿಸಿದ್ದಾರೆ ಪ್ರಕರಣಗಳನ್ನು ನಾನೇ ವಾದಮಾಡಿ ಕುಲಾಸ್ ಮಾಡಿಕೊಂಡಿದ್ದೇನೆ ಆದರೆ ಇದರಿಂದ ನನ್ನನ್ನು ರೌಡಿಯಂತೆ ಬಿಂಬಿಸಿದರು. ಹೆಂಡತಿ ತಮ್ಮ ಸೇರಿದಂತೆ ಎಲ್ಲರೂ ದೂರಾದರು ಎಂದು ನೋವು ತೋಡಿಕೊಂಡರು ರಾಜ್ಯದ ಐಪಿಎಸ್ ಅಧಿಕಾರಿಗಳ ಇತಿಹಾಸ ನನ್ನ ಕೈಯಲ್ಲಿದೆ ನೇರವಾಗಿ ನನ್ನ ಮೇಲೆ ಯುದ್ಧಕ್ಕೆ ಬನ್ನಿ ಎಂದು ಏಕವಚನದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.