ಇಲ್ಲಿದೆ ಸೀಡಿ ಲೇಡಿ ಜೊತೆ ಯುವಕನ ಸಂಭಾಷಣೆ
1ತಿಂಗಳಿಂದ ರಾಜ್ಯದ ಪ್ರತಿ ಮನೆಯ ಟಿವಿಯಲ್ಲಿ ಇಡಿ ಜೆಡಿ ಮತ್ತು ಜಾರಕಿಹೊಳಿ ಎಂಬ ಪದ ಅದೆಷ್ಟು ಬಾರಿ ಪ್ರಸಾರವಾಗಿದೆ ಎಂಬುದು ಲೆಕ್ಕಕ್ಕೆ ಸಿಗುತ್ತಿಲ್ಲ 
ಅಭಿವೃದ್ಧಿ ಇರಲಿ ಹೆಚ್ಚಾಗುತ್ತಿರುವ ಕೊರೊನಾ ಬಗ್ಗೆ ಟೀವಿಗಳು ಗಮನಹರಿಸುತ್ತಿಲ್ಲ ಈ ಕರ್ಮಕಾಂಡವನ್ನು ಚಿಕ್ಕಮಕ್ಕಳಿಂದ ವಯಸ್ಸಾದ ನಾಗರಿಕರಿಗೂ ಕೂಡ ಮುಜುಗರದ ಜೊತೆಜೊತೆಯಲ್ಲಿ ವೀಕ್ಷಿಸಿದ್ದಾರೆ 
ಸಮಾಜದಲ್ಲಿ ಗೌಪ್ಯವಾದ ವಿಚಾರ ಎನ್ನುವುದನ್ನು ಈ ಈ ವ್ಯವಸ್ಥೆ ಆನ್ ಲೈನ್ ನಲ್ಲಿ ಸೇರಿಕೊಂಡ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಸಹ ಮುಟ್ಟಿಸುವ ಕೆಲಸ ಮಾಡಿದ್ದಾರೆ  ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳು ನಮ್ಮ ದೇಶಕ್ಕೆ ತಂದೆತಾಯಿಗಳಿಗೆ ಯಾವ ರೀತಿ ಋಣಿಯಾಗಿರುತ್ತಾರೆ ಎಂಬುದು ಪ್ರಶ್ನೆಯಾಗಿದೆ 
ಇಬ್ಬರ ಸಂಬಂಧಗಳನ್ನು ಈ ವ್ಯವಸ್ಥೆ ರಾಜ್ಯದ ಜನತೆ ಸೇರಿದಂತೆ ಪ್ರತಿ ಮನೆಗೂ ತಲುಪಿಸುತ್ತಿದ್ದಾರೆ ಇದರಿಂದ ಕೇವಲ ಟಿಆರ್ ಪಿಗಳು ಹೆಚ್ಚಾಗುತ್ತಿದೆ ಹೊರತು ಬೇರೆ ಯಾವುದೂ ಇಲ್ಲ 
ಸಾಮಾಜಿಕ ಜಾಲ ತಾಣಗಳು ಅಂತಹ ವಿಚಾರಗಳನ್ನು ನಿರ್ಬಂಧಿಸಬಹುದು ಆದರೆ ಈ ಮಾಧ್ಯಮಗಳು ಆ ಕೆಲಸ ಮಾಡುತ್ತಿಲ್ಲ ಜನರ ಸಮಸ್ಯೆ ಹಾಗೂ ಅಭಿವೃದ್ಧಿ ಕಡೆ ಚಿಂತಿಸುತ್ತಿಲ್ಲ 
ಬೇಡದ ವಸ್ತು ವನ್ನು ಬಲವಂತವಾಗಿ ಮನೆಗಳಿಗೆ ತಂದು ಅಲ್ಲಿನ ವಾಸಿಗಳ ಮೇಲೆ ಏರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ 
ಮುಂದಿನ ದಿನಗಳಲ್ಲಿ ಇದು ಬದಲಾಗಬೇಕು ಎಂಬುದು ನಿಜವಾದ ಆಶಯ