ಸಿಹಿಗೆ ಹೆಸರಾದ ಮಂಡ್ಯದಲ್ಲಿ ನಕಲಿ ಬೆಲ್ಲದ ಹಾವಳಿ
ಬೆಲ್ಲ ಎಂದ ತಕ್ಷಣ ನೆನಪಾಗುವುದು ನಮಗೆ ಮಂಡ್ಯ ಜಿಲ್ಲೆ 
ಇಲ್ಲಿ ಉತ್ಪಾದನೆಯಾಗುವ ಬೆಲ್ಲಕ್ಕೆ ದೇಶ ಸೇರಿದಂತೆ ವಿವಿಧೆಡೆಗಳಲ್ಲಿ ಉತ್ತಮವಾದ ಬೇಡಿಕೆ ಇದೆ 
    ಇಲ್ಲಿ ಉತ್ಪಾದನೆಯಾಗುವ ಈ ಸಿಹಿಯಾದ ಬೆಲ್ಲದ ಮೇಲೆ ಕೆಲವು ಕರಾಳ ದಂಧೆಯ ವ್ಯಕ್ತಿಗಳ ಕರಿನೆರಳು ಬಿದ್ದಿದೆ 
ಮಂಡ್ಯ ಬೆಲ್ಲಾದ ಹೆಸರಿನಲ್ಲಿ ಹೊರ ರಾಜ್ಯಗಳಿಂದ ಕಳಪೆ ಗುಣಮಟ್ಟದ ರಿಬೋ ರ್ಟ್ ಬೆಲ್ಲವನ್ನು ತಂದು ಮಾರುವ ಪ್ರಯತ್ನ ನಡೆಯುತ್ತಿದೆ 
ಇಂಥ ನಕಲಿ ದಂಧೆಯನ್ನು ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳು ಪತ್ತೆಹಚ್ಚಿದ್ದಾರೆ 
ಮಂಡ್ಯದ ಸಿಹಿಯಾದ ಬೆಲ್ಲಕ್ಕೆ ಹಲವಾರು ರಾಸಾಯನಿಕ ಸೇರಿದಂತೆ ಸಕ್ಕರೆಯನ್ನು ಮಿಶ್ರಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೆಟ್ಟ ಪ್ರಯತ್ನ ಇವರದು 
ನೀವು ಬೆಲ್ಲ ಖರೀದಿ ಮಾಡುವಾಗ ಜಾಗೃತರಾಗಿರಬೇಕು ಅಷ್ಟೇ ಅಲ್ಲದೆ ಬೆಲ್ಲದ ಮೂಲವನ್ನು ಕೂಡ ಕೇಳಬೇಕಾದ ಅನಿವಾರ್ಯತೆ ಇದೆ 
ಈ ಸಂಬಂಧ ಮಂಡ್ಯ ರೈತರು ಕೂಡ ಇಂತಹ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ