ಮೊಮ್ಮಕ್ಕಳ ಮೇಲೆ ಹಠಕ್ಕೆ ಬಿದ್ದು ಮದುವೆ ಮಾಡಿಕೊಳ್ಳಬೇಕೆಂದು ವಿದ್ಯುತ್ ಕಂಬವನ್ನು ಏರಿ ಕುಳಿತಿದ್ದಾನೆ ತಾತ
ಜೈಪುರ:ತಾತನ ಮುಂದೆ ಮೊಮ್ಮಕ್ಕಳು ಆಟವಾಡುವುದು ಸಾಮಾನ್ಯ ವಿಚಾರ ಆದರೆ ಇಲ್ಲೊಬ್ಬ ತಾತ ಎರಡನೇ ಮದುವೆ ಮಾಡಿಕೊಳ್ಳಬೇಕೆಂದು ಮೊಮ್ಮಕ್ಕಳ ಮೇಲೆ ಹಠಕ್ಕೆ ಬಿದ್ದು ವಿದ್ಯುತ್ ಕಂಬವನ್ನು ಏರಿ ಕುಳಿತಿದ್ದಾನೆ 
ಈ ವಿಚಾರ ಕೇಳಿದ್ರೆ ನಂಗೆ ವಿಚಿತ್ರ ಅನ್ನಿಸುತ್ತೆ ಆದ್ರೆ ಇದು ನಡೆದಿರುವುದು ರಾಜಸ್ಥಾನ  ಜಿಲ್ಲೆಯಲ್ಲಿ 
ಅರುವತ್ತು ವರ್ಷದ ಸೊಬ್ರಾನ್  ಸಿಂಗ್ ನ ಹೆಂಡತಿ  ಕಳೆದ 4ವರ್ಷದಿಂದ ಮೃತಳಾಗಿದ್ದಳು 
ಅವನಿಗಿದ್ದ 5ಮಕ್ಕಳಲ್ಲಿ 3ಗಂಡು ಹಾಗೂ 2ಹೆಣ್ಣು ಮಕ್ಕಳಿಗೂ ಮದುವೆಯಾಗಿತ್ತು 
ತುಂಬು ಕುಟುಂಬದಲ್ಲಿ ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದ ಈ ತಾತನಿಗೆ ಕೆಲವು ದಿನಗಳಿಂದ  ಮದುವೆಯ ಆಸೆ ಉಂಟಾಗಿದೆ 
ಈ ಸಂಬಂಧ ತಾತ ತನ್ನ ಮನೆಯಲ್ಲಿ ಮದುವೆ ವಿಚಾರವಾಗಿ ಪ್ರಸ್ತಾಪಿಸಿದಾಗ ಜಗಳ ಉಂಟಾಗಿದೆ
ತಾನು ಮದುವೆ ಆಗುವುದಾಗಿ ಪಟ್ಟು ಹಿಡಿದ ತಾತ ಮೊಮ್ಮಕ್ಕಳನ್ನು ಒಪ್ಪಿಸುವ ಸಲುವಾಗಿ ಗ್ರಾಮದಲ್ಲಿ ಇದ್ದ ವಿದ್ಯುತ್ ಕಂಬವನ್ನು ಹತ್ತಿ ಕುಳಿತಿದ್ದಾನೆ 
ಮದುವೆಗೆ ನೀವು ಒಪ್ಪದಿದ್ದರೆ ನಾನು ವಿದ್ಯುತ್ ತಂತಿ ಮುಟ್ಟಿ ಸಾಯುತ್ತೇನೆ ಎಂದು ಎಚ್ಚರಿಸಿದ್ದಾನೆ 
ತಾತ ಏರಿ ಕೂತಿದ್ದ ವಿದ್ಯುತ್ ಕಂಬದಲ್ಲಿ ಅದೃಷ್ಟವಶಾತ್ ವಿದ್ಯುತ್ ಇರಲಿಲ್ಲ 
ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸಮಾಧಾನಕರ ವಿಚಾರ 
ನಂತರ ಗ್ರಾಮಸ್ಥರು ಮೊಮ್ಮಕ್ಕಳು ಸೇರಿ ಆತನನ್ನು ಮನವೊಲಿಸಿ ವಿದ್ಯುತ್ ಕಂಬದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ