ಶ್ರೀ ಸಿದ್ಧಲಿಂಗೇಶ್ವರರ ತಪೋಕ್ಷೇತ್ರ ಕಗ್ಗೆರೆಯಲ್ಲಿ

 à²®ಾರ್ಚ್ 20 ರ ಶನಿವಾರ ಮಹಾರಥೋತ್ಸವ 

ಶ್ರೀ ಸಿದ್ಧಲಿಂಗೇಶ್ವರರ ತಪೋಕ್ಷೇತ್ರ ಕಗ್ಗೆರೆಯಲ್ಲಿ ಮಾರ್ಚ್ 20 ರ ಶನಿವಾರ ಮಹಾರಥೋತ್ಸವ 
ಎಡೆಯೂರು ಶ್ರೀ ಸಿದ್ದಲಿಂಗೇಶ್ವರ 12 ವರುಷಗಳು ಶಿವಯೋಗದಲ್ಲಿ 
ತನ್ನ ಭಕ್ತನ ಬರುವಿಕೆಗಾಗಿ ತಪಸ್ಸು ಮಾಡಿದ ಪವಿತ್ರ ಭೂಮಿ!

 à²¤à²ªೋಕ್ಷೇತ್ರ ಕಗ್ಗೆರೆ 
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿಯಲ್ಲಿ ಇರುವುದು ಈ ಪುಣ್ಯಭೂಮಿ ತಪೋಕ್ಷೇತ್ರ ಕಗ್ಗೆರೆ

ಪಶ್ಚಿಮಾಭಿಮುಖವಾಗಿ ಹರಿಯುವ ವಿಶೇಷವಾದ ನಾಗಿನಿ ನದಿಯ 
ವನರಾಶಿಯ ಮಧ್ಯದಲ್ಲಿ  ಅಭಿಜಿನ್ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ ನಡೆಯಲಿದೆ 

ಶಿವರಾತ್ರಿ ದಿನದಿಂದ ಸ್ಥಳೀಯ ವೀರಶೈವ ಲಿಂಗಾಯತ ಸಮಾಜದ ಮಹಿಳೆಯರು ಶ್ರೀ ಸಿದ್ಧಲಿಂಗೇಶ್ವರರು ಮತ್ತು ಘನಲಿಂಗ ಶಿವಯೋಗಿ ಗಳಿಗೆ ಅರ್ಪಿಸುವ ಆರತಿ ಪೂಜೆ ಜಾತ್ರಾ ಕಾರ್ಯಕ್ರಮಗಳನ್ನು  ಪ್ರಾರಂಭಿಸುತ್ತಾರೆ 

ಮಾರ್ಚ್ ಇಪ್ಪತ್ತ ರ ಶನಿವಾರ ಫಾಲ್ಗುಣ ಶುದ್ಧ ಸಪ್ತಮಿಯಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಶ್ರೀ ಸ್ವಾಮಿಗೆ ಮಹಾ ರಥೋತ್ಸವ ನಡೆಯಲಿದೆ 
ಜಾತ್ರಾ ವಿಶೇಷವಾಗಿ ಪ್ರತಿದಿನ ತಪೋ ಕ್ಷೇತ್ರದಲ್ಲಿ ಅಡ್ಡಪಲ್ಲಕ್ಕಿ ನಂದಿವಾಹನ ಬಸವವಾಹನ ಶೇಷ ವಾಹನ ನವಿಲು ವಾಹನ ಹುತ್ತದ ವಾಹನ ಸೇರಿದಂತೆ ಹಲವಾರು ಉತ್ಸವಗಳು ನಡೆಯುತ್ತವೆ 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಕಣ್ಮನ ಸೆಳೆಯಲಿವೆ 
ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು ವಾಹನ ನಿಲ್ದಾಣ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಶ್ರೀಕ್ಷೇತ್ರದ ವತಿಯಿಂದ ಒದಗಿಸಲಾಗುವುದು ಎಂದು ಸ್ಥಳೀಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ತಿಳಿಸಿದ್ದಾರೆ