ಕೊಲ್ಲಾಪುರದಮ್ಮ ನಿಗೆ ಸುರಿದ ಹೂಮಳೆ
ಕುಣಿಗಲ್ ಪಟ್ಟಣ ಸೇರಿದಂತೆ ವಿವಿಧೆಡೆಗಳಲ್ಲಿ ಗ್ರಾಮದೇವತೆ ಹಬ್ಬಗಳು ಅದ್ದೂರಿಯಾಗಿ ನಡೆದವು
 ಕೊಲ್ಲಾಪುರದಮ್ಮ ನಿಗೆ ಸುರಿದ  ಹೂಮಳೆ 
 ಕುಣಿಗಲ್ ಪಟ್ಟಣದ ಕೊಲ್ಲಾಪುರದಮ್ಮ ದೇವಿಗೆ ಹಬ್ಬದ ಪ್ರಯುಕ್ತವಾಗಿ ವಿಶೇಷವಾದ ಅಲಂಕಾರ ಮಾಡಲಾಗಿತ್ತು ಭಕ್ತರು ಮನೆಗಳ ಮೇಲೆ ನಿಂತು ಹೂಮಳೆಯನ್ನು ದೇವಿಯ ಮೇಲೆ ಕರೆದರು
 ಪಟಾಕಿ ಸಿಡಿಸಿ ಸಿಹಿ ಹಂಚಿ ಕೊಲ್ಲಾಪುರದಮ್ಮ ದೇವಿಯ ಮುಂದೆ ನೃತ್ಯಮಾಡಿ ಭಕ್ತರು ಭಕ್ತಿ ಪರವಶ ವಾದರು
 ಹುಲಿಯೂರಮ್ಮ ನಿಗೆ ನಡೆದ ಕೊಂಡೋತ್ಸವ 
 ಹುಲಿಯೂರು ದುರ್ಗದ ಹುಲಿಯೂರಮ್ಮ ದೇವಾಲಯದಲ್ಲಿ ಕೊಂಡೋತ್ಸವ ವಿಶೇಷವಾಗಿ ನಡೆಯಿತು  ಅಕ್ಕಪಕ್ಕದ ಗ್ರಾಮ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಹುಲಿಯೂರಮ್ಮ ದೇವಾಲಯದ ಸುತ್ತಮುತ್ತ ಭಾಗವಹಿಸಿ ದರ್ಶನ ಪಡೆದರು
 ಪಟ್ಟಣದಲ್ಲಿ ನಡೆಯಿತು ದುರ್ಗಾದೇವಿ ಉತ್ಸವ
 ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ದುರ್ಗಾದೇವಿ ಪೂಜೆ ಆರತಿ ಉತ್ಸವಗಳು ನಡೆದವು
 ಹಬ್ಬದ ಪ್ರಯುಕ್ತವಾಗಿ ದುರ್ಗಾಮಾತೆಗೆ ವಿಶೇಷವಾದ ಹೂವಿನ ಅಲಂಕಾರಗಳಿಂದ ಶೃಂಗರಿಸಲಾಗಿತ್ತು ಕುಣಿಗಲ್ ದೊಡ್ಡಕೆರೆ ಕರೆದುಕೊಂಡು ಹೋಗಿ ಪುಣ್ಯಾಹ ಮಾಡಿ ಕರೆತರಲಾಯಿತು
 ರಾಜಬೀದಿಯಲ್ಲಿ ನಡೆದ ಕೋಟೆ ಮಾರಮ್ಮನ ಉತ್ಸವ 
 ಕುಣಿಗಲ್ ಪಟ್ಟಣದ ಕೋಟೆ ಮಾರಮ್ಮ ದೇವಾಲಯದಲ್ಲಿ ವಿಶೇಷವಾದ ಅಲಂಕಾರ ಉತ್ಸವ ಸೇರಿದಂತೆ ಇತರ ಪೂಜಾವಿಧಿಗಳು ಸಾಂಗೋಪವಾಗಿ ನಡೆದವು
 ಮಂಗಳ ಬಸವಣ್ಣನ ಕ್ಷೇತ್ರದಲ್ಲಿ ನಾಟಕ ಅನ್ನದಾನ
 ಕುಣಿಗಲ್ ತಾಲ್ಲೂಕಿನ ಎಡಿಯೂರು ಹೋಬಳಿಯ ಮಂಗಳ ಗ್ರಾಮದಲ್ಲಿ ನಡೆದ ಬಸವಣ್ಣನ ಜಾತ್ರೆ ವಿಶೇಷವಾಗಿತ್ತು ಅರ್ಚಕರಾದ ಶಿವಕುಮಾರ ಸ್ವಾಮಿಯ ಕೊಂಡ ಹಾಯುವ ಮುಖಾಂತರ ಜಾತ್ರೆಯನ್ನು ನೆರವೇರಿಸಿದರು
 ಜಾತ್ರೆಗೆ ಬಂದ ಭಕ್ತರಿಗೆ ಅನ್ನದಾಸೋಹದ ಜೊತೆಗೆ ವಿಶೇಷವಾದ ಮನರಂಜನಾ ಕಾರ್ಯಕ್ರಮವನ್ನು ಕೂಡ ದೇವಾಲಯ ಮತ್ತು ಗ್ರಾಮಸ್ಥರ ವತಿಯಿಂದ ಏರ್ಪಡಿಸಲಾಗಿತ್ತು
 ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲಿಸಿದ ಅಧಿಕಾರಿಗಳು
 ಕುಣಿಗಲ್ ಪಟ್ಟಣದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪುರಸಭಾ ಅಧ್ಯಕ್ಷ ನಾಗೇಂದ್ರ ಮುಖ್ಯ ಅಧಿಕಾರಿ ರವಿಕುಮಾರ್ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು