ಕುಣಿಗಲ್ ನಲ್ಲಿ ಅಪಘಾತವಾದ KSRTC ಬಸ್
ಕುಣಿಗಲ್ ತಾಲ್ಲೂಕಿನ ಕೊತ್ತಿಪುರ ದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಾಲುವೆಗೆ ಬಿದ್ದಿದೆ 
ಬಸ್ ಅಪಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಗಾಜುಗಳು ಪುಡಿಪುಡಿ ಕೊಂಡಿವೆ ಬಸ್ ನ  ಇತರ ಕೆಲವೆಡೆಗಳಲ್ಲಿ ಜಖಂಗೊಂಡಿದೆ 
ಇದರಲ್ಲಿ ತುಮಕೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ಬಹುತೇಕ ಪ್ರಯಾಣಿಕರು ಇದ್ದು ಯಾವುದೇ ಪ್ರಾಣಾಪಾಯವಾಗಿಲ್ಲ ಸಣ್ಣಪುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ 
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಘಟನೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ 
ಕೆಶಿಪ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪಿಡಬ್ಲ್ಯುಡಿ ಆಫೀಸರ್
ತುಮಕೂರಿನಿಂದ ಮದ್ದೂರಿಗೆ ನಿರ್ಮಿಸಲಾಗಿರುವ ಬಾವುಲಿ ರಸ್ತೆ ಕೆಶಿಪ್ ಕಾಮಗಾರಿ ಪೂರ್ಣಗೊಂಡಿದ್ದು ಈಗಾಗಲೇ ಟೋಲ್ ವಸೂಲಿ ಮಾಡಲಾಗುತ್ತಿದೆ 
ಮೂಲಭೂತ ಸೌಕರ್ಯ ಸೇರಿದಂತೆ ಫುಟ್ ಪಾತ್ ಗಳನ್ನು ಒದಗಿಸಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಗುರುಪ್ರಸಾದ್ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು 
ರಸ್ತೆಯ ಎರಡೂ ಬದಿಗಳಲ್ಲಿ ಇದ್ದ ಹಲವಾರು ಸಮಸ್ಯೆಗಳನ್ನು ಪರಿಶೀಲಿಸಿದ ಗುರುಪ್ರಸಾದ್ ಕೆಶಿಪ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು 
ಸರ್ಕಾರದಿಂದ ಪಡೆಯುವ ಹಣಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಮನೆಯಲ್ಲಿ ಇರುವಂತೆ ಖಡಕ್ ಎಚ್ಚರಿಕೆ ನೀಡಿದರು 
  ತಾವು ಮಾಡಿದ ತಪ್ಪಿನ ಅರಿವಿನಿಂದ ಕ್ಷಮೆ ಕೇಳಿದ ಕೆಶಿಪ್ ಅಧಿಕಾರಿಗಳು ಮುಂದಿನ 1ತಿಂಗಳಲ್ಲಿ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮುಂದೆ ಬೇಡಿಕೊಂಡರು 
ಪ್ರಾರ್ಥಮಿಕ ಶಾಲೆ ತೆರೆಯಲು ಒತ್ತಾಯ
ಕಾಲೇಜು ಶಿಕ್ಷಣ ಪ್ರೌಢಶಿಕ್ಷಣ ಈಗಾಗಲೇ ಪ್ರಾರಂಭವಾಗಿದೆ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಹಲವಾರು ಮಕ್ಕಳು ಬೀದಿ ಬೀದಿ ಸುತ್ತುತ್ತಿದ್ದಾರೆ ಕಾಡು ಮೇಲೂ ಅಲೆಯುತ್ತಿದ್ದಾರೆ ಆದ್ದರಿಂದ ತಕ್ಷಣ ಆ ಶಾಲೆಗಳನ್ನು ಪ್ರಾರಂಭ ಮಾಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಬಿ ಕೆ ಶ್ರೀನಿವಾಸ್ ಆಗ್ರಹಿಸಿದ್ದಾರೆ