ಪಕ್ಷ ನನಗೆ ವಹಿಸಿರುವ ರಾಜ್ಯ ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷರ  ಜವಾಬ್ದಾರಿಗೆ  ನಾನು ಆಭಾರಿಯಾಗಿದ್ದೇನೆ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ 
ಕುಣಿಗಲ್ ಪಟ್ಟಣದ ಗ್ರಾಮದೇವತೆ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ್ದ ಅಭಿನಂದನಾ ಮತ್ತು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು 
ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರನ್ನು ಬೆಳೆಸುತ್ತವೆ ಎಂಬುದಕ್ಕೆ ಇಂದು ನನಗೆ ನೀಡಿರುವ ಈ ಅಧಿಕಾರವೇ ಸಾಕ್ಷಿಯಾಗಿದೆ 
ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷರಾಗಿ ನನ್ನನ್ನು ನೇಮಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸವದಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಗೌಡ ಸೇರಿದಂತೆ ಹಲವಾರು ಮಂದಿ ಶ್ರಮಿಸಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು 
ಪಿಎಲ್ ಡಿ ಬ್ಯಾಂಕ್ ಅಭಿವೃದ್ಧಿಗಾಗಿ ಅವಿರತವಾಗಿ ನಾನು ಶ್ರಮಿಸುತ್ತೇನೆ ಅಲ್ಲಿರುವ ಹಲವಾರು ಸಮಸ್ಯೆಗಳನ್ನು ದೂರ ಮಾಡಿ ಪ್ರತಿಯೊಂದು ಸೌಲಭ್ಯಗಳು ನಿಜವಾದ ಫಲಾನುಭವಿಗೆ ತಲುಪಿಸುವ ಕರ್ತವ್ಯವನ್ನು ಮಾಡುತ್ತೇನೆ ಎಂದರು 
ತುಮಕೂರು ಕುಣಿಗಲ್ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಪಿಎಲ್ ಡಿ ಬ್ಯಾಂಕ್ ನ ಕಟ್ಟಡದ ಸಮಸ್ಯೆ ಇದೆ ತಕ್ಷಣ ಅಂತಹ ಪ್ರದೇಶಗಳನ್ನು ಗುರುತಿಸಿ ಉತ್ತಮವಾದ ಬ್ಯಾಂಕ್ ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿದೆ ಎಂದರು 
ಮುಂದಿನ ದಿನಗಳಲ್ಲಿ ಕುಣಿಗಲ್ಸ್ ತಾಲ್ಲೂಕಿನ ಆದ್ಯಂತ ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲ ಪಡಿಸುವುದರ ಜೊತೆಗೆ ಪ್ರತಿಯೊಂದು ಸಮಿತಿಯ ಸದಸ್ಯರನ್ನು ನೇಮಕ ಮಾಡಲು ತಯಾರಿ ನಡೆಸುತ್ತಿದ್ದೇನೆ ಎಂದರು 
ಗ್ರಾಮದೇವತೆ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು  ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್, ಯಡಿಯೂರಪ್ಪ ತಿಮ್ಮೇಗೌಡ, ಡೈರಿ ಗೋಪಿ, ಪುರಸಭಾ ಸದಸ್ಯರಾದ ಕೋಟೆ ನಾಗಣ್ಣ ,ಆನಂದ್ ,ಬುಲೆಟ್ ಜಯರಾಮ್,ದೇವರಾಜ್,ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು
Kunigal Vasanth