ಮುಂದಿನ ಕೆಲವೇ ದಿನಗಳಲ್ಲಿ ನಗದು ರಹಿತ ಚಿಕಿತ್ಸೆ

ಕುಣಿಗಲ್ :- ಕೆಜಿಐಡಿ ಹಣ ನೇರವಾಗಿ ಇನ್ನುಮುಂದೆ ನೌಕರರ ಖಾತೆಗೆ ಸೇರಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ 
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು 
ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಸರ್ಕಾರಿ ನೌಕರರ ಹಲವಾರು ಸೇವೆಗಳಿಗೆ ಅಸ್ತು ಎಂದಿರುವುದು ಅಭಿನಂದನಾ ವಿಚಾರ 
ಮುಂದಿನ ಕೆಲವೇ ದಿನಗಳಲ್ಲಿ ನಗದು ರಹಿತ ಚಿಕಿತ್ಸೆ ಯನ್ನು ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿಗಳನ್ನು  ಅಭಿನಂದಿಸಿದರು 
ಸರ್ಕಾರಿ ನೌಕರರ ಡಿಎ ಹಣವನ್ನು 7ಸಾವಿರ ಕೋಟಿ ನಾವು ಸರ್ಕಾರಕ್ಕೆ ವಾಪಸ್ ಸಹಾಯ ಹಸ್ತ ನೀಡಿದ್ದೇವೆ  ಆದ್ದರಿಂದ ಸರ್ಕಾರ ನಮ್ಮ ಮೇಲೆ ತುಂಬಾ ವಿಶ್ವಾಸ ವನ್ನು ಪಡೆದಿದೆ ಎಂದರು ಹೊಸ  ಎನ್ ಪಿಎಸ್ ನೌಕರರ ತಿದ್ದುಪಡಿ ಮಾಡಬೇಕಾಗಿದ್ದ ಹಳೆ ಪಿಂಚಣಿ ಯೋಜನೆಯನ್ನು ಮುಂದೂಡಬೇಕಾದ ಅನಿವಾರ್ಯತೆ ಇದೆ ಅದಕ್ಕಾಗಿ ನಾವು ಹೋರಾಟ ಮಾಡಲು  ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು 
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮೋಹನ್ ಪ್ರಧಾನ ಕಾರ್ಯದರ್ಶಿ ಜಗದೀಶ್ ತುಮಕೂರು ಜಿಲ್ಲಾ ಅಧ್ಯಕ್ಷ ನರಸಿಂಹರಾಜು ತಾಲ್ಲೂಕು ಅಧ್ಯಕ್ಷ ವೆಂಕಟೇಶ್  ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನಾಗಮ್ಮ ಕೃಷ್ಣಮೂರ್ತಿ ಹಾಗೂ ಸಂಘದ ಪದಾಧಿಕಾರಿಗಳಾದ ಹನುಮಂತ ಕಾರ್ಯದರ್ಶಿ ವಿನೋದ್ ಶಿವರಾಜ್ ರಾಜಶೇಖರ್  ಹಾಗೂ ಜಿಲ್ಲಾ ಪ್ರಾರ್ಥಮಿಕ ಸಂಘದ ಅಧ್ಯಕ್ಷರಾದ ಪರಶಿವಮೂರ್ತಿ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು 
ಫೋಟೋ ಇದೆ ಕುಣಿಗಲ್  ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ನಡೆದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸಮಾರಂಭ