ಸ್ವಾಮೀಜಿ ಮಾತಲ್ಲಿ ಆ ಮನೆ ಊಟ ಸೂಪರ್ ಈ ಮನೆಯ ಊಟ ಸರಿಯಿಲ್ಲ

ಶ್ರೀ ಕ್ಷೇತ್ರ ಎಡೆಯೂರ ಶ್ರೀ ಸಿದ್ಧಲಿಂಗೇಶ್ವರರ ಸನ್ನಿಧಿಯಲ್ಲಿ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ನುಡಿದ ಮಾತುಗಳಿವು 

ಯಾರ ಮನೆಯಲ್ಲಿ ನೆಮ್ಮದಿಯ ಊಟ ಇರುತ್ತದೆ ಯಾರ ಮನೆಯಲ್ಲಿ ನೆಮ್ಮದಿಯ ಊಟ ಇರುವುದಿಲ್ಲ ಎಂಬುದು ಈ ಬದುಕಿನಲ್ಲಿ ಬಹುಮುಖ್ಯ 
ಹಣ ಬಂದಾಗ ನೆಮ್ಮದಿ ಹಾಳಾಗುವುದು ಸಾಮಾನ್ಯ ಹಣ ಮತ್ತು ನೆಮ್ಮದಿ ಒಂದೇ ಕಡೆ ಇರುವುದು ನಿಜವಾದ ಸಾರ್ಥಕವಾದ ಸಮೃದ್ದಿ ಬದುಕು ಎಂಬುದು ಸ್ವಾಮೀಜಿ ಮಾತು 
ನಾವು ಎಷ್ಟು ಹಣ ಸಂಪಾದಿಸಿದರೂ ಕೂಡ ಅದು ಸಂಸ್ಕಾರಯುತವಾಗಿ ಇರಬೇಕು ಆದ್ದರಿಂದ ನಮಗೆ ನೆಮ್ಮದಿಯ ಜೀವನ ನಡೆಸಿದಾಗ ಆ ಅರ್ಥ ಸಿಗುತ್ತದೆ 
ಕೇವಲ ಹಣದ ಹಿಂದೆ ಹೋದವರು ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ನಿಷ್ಕಳಂಕವಾದ ಮನಸ್ಸಿನಿಂದ ಭಗವಂತನನ್ನು ಸ್ಮರಿಸಿದಾಗ ಉತ್ತಮ ಬದುಕು ನೆಮ್ಮದಿ ಸಿಗುತ್ತದೆ 
ಇಂತಹ ಹಲವಾರು ನೀತಿ ತತ್ವ ಸಿದ್ಧಾಂತಗಳನ್ನು ಶ್ರೀ ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಮಠದ ಪೀಠಾಧ್ಯಕ್ಷರು ಬಂದಿದ್ದರು ಅಂತಹ ಸೇವೆಯ ಕಾಲದಲ್ಲಿ ನಾವೆಲ್ಲಾ ಇದ್ದೇವೆ ಎಂಬುದು ನಮ್ಮ ಪುಣ್ಯ 
ಅವರು ನಂಬಿದ ಸಿದ್ಧಲಿಂಗೇಶ್ವರ ಇವತ್ತೂ ಕೂಡ ಜೀವಂತವಾಗಿ ಈ ಗದ್ದುಗೆಯಲ್ಲಿ ನೆಲೆನಿಂತು ಈ ನಾಡಿನ ಜನರನ್ನು ಸಲಹುತ್ತಿದ್ದಾರೆ ಆದ್ದರಿಂದ ನಾವು ನಿಷ್ಕಳಂಕವಾದ ಮನಸ್ಸಿನಿಂದ ನಾವು ಪ್ರಾರ್ಥಿಸಿದಾಗ ನಮ್ಮ ಉತ್ತಮವಾದ ಬಯಕೆಗಳು ಈಡೇರುತ್ತವೆ ಎಂದರು