ಮತ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಮತಗಟ್ಟೆ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದಂಪತಿಗಳು  ಬೆದರಿಕೆ ಹಾಕಿದ್ದಾರೆ ಹಿರಿಯ ನಾಗರಿಕರು 

ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗೆಹಳ್ಳಿ ಗ್ರಾಮದಲ್ಲಿ ನಡೆದ ಘಟನ

ಗ್ರಾಮದ ಬೋರಮ್ಮ ಗೂಳಯ್ಯ ಎಂಬುವರು ಈ ಕೃತ್ಯಕ್ಕೆ ಮುಂದಾದ ಹಿರಿಯ ನಾಗರಿಕರು 
ಹಲವಾರು ವರುಷಗಳಿಂದ ಈ ಗ್ರಾಮದಲ್ಲಿ ವಾಸವಿದ್ದೇವೆ ಇಲ್ಲಿ ಹಲವಾರು ಚುನಾವಣೆಗಳಲ್ಲಿ ನಮ್ಮ ಇಷ್ಟಕ್ಕೆ ಬಂದ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಿ ದ್ದೇವೆ ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಮ್ಮನ್ನು ಕೈ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ 


ರಾಜಕೀಯ ಪ್ರೇರಿತವಾಗಿ ನಮ್ಮನ್ನು ಕೈ ಬಿಟ್ಟಿದ್ದು ನಾವು ಮತಗಟ್ಟೆಯಲ್ಲೇ ವಿಷಪ್ರಾಸನ ಮಾಡಿಕೊಂಡು ಸಾಯುತ್ತೇವೆ ಎಂದು ಈ ಹಿರಿಯ ಜೀವಿಗಳು ಎಚ್ಚರಿಸಿದ್ದಾರೆ 
ಅವರ ಪುತ್ರ ಲಕ್ಷ್ಮಣ್ ಮಾತನಾಡಿ ರಾಜಕೀಯ ಪ್ರೇರಿತವಾಗಿ ಅಧಿಕಾರಿಗಳು ಈ ಕೃತ್ಯ ಮಾಡಿದ್ದಾರೆ ಇದನ್ನು ಸರಿಪಡಿಸಿ ಮತ್ತೆ ಮತ  ಪಟ್ಟಿಯಲ್ಲಿ ನಮ್ಮ ತಂದೆ ತಾಯಿಗಳನ್ನು ಸೇರಿಸುವಂತೆ ಒತ್ತಡ ಹಾಕಿದರು ಸ್ಪಂದಿಸುತ್ತಿಲ್ಲ  ಮತಗಟ್ಟೆಯಲ್ಲಿ ಅವ್ಯವಹಾರ ನಡೆಯುತ್ತಿದ್ದು ಇದಕ್ಕೆ ಅಧಿಕಾರಿಗಳು ಉತ್ತರಿಸಬೇಕು ಎಂದರು 
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಮತದಾರನನ್ನು ಈ ರೀತಿ ಕೈಬಿಟ್ಟಿರುವುದು ಸಾಮಾನ್ಯ ಸಂಗತಿಯಾಗಿದೆ ತಹಸೀಲ್ದಾರ್ ಇದರ ಬಗ್ಗೆ ಕ್ರಮ ವಹಿಸಬೇಕು ಆದರೆ ಅವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ 
ಮತದಾನ ತಿದ್ದುಪಡಿ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ನಮಗೆ ಸ್ಪಂದಿಸಿಲ್ಲ ಮತ ಪಟ್ಟಿಯನ್ನು ವರ ತಂದ ನಂತರ ನಮಗೆ ಇವರ ಕುತಂತ್ರ ಬಯಲಾಗಿದೆ ಎಂದು ಶ್ರೀನಿವಾಸ ದೂರಿದ್ದಾರೆ 
ಹೇರೂರು ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಅಕ್ರಮಗಳನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ತಡೆಯಬೇಕು ಎಂದು ಗ್ರಾಮದ ಪುಟ್ಟಾಚಾರಯ್ಯ  ಒತ್ತಾಯಿಸಿದ್ದಾರೆ